Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಬೆಂಗಳೂರು ಕಂಬಳದಲ್ಲಿ ಕೊರಗರ...

ಬೆಂಗಳೂರು ಕಂಬಳದಲ್ಲಿ ಕೊರಗರ "ಪನಿಕುಲ್ಲುನ" ಅಜಲು ಆಚರಣೆಯ ಆತ್ಮವಿಮರ್ಶೆಯೂ ನಡೆಯುತ್ತದೆಯೇ?: ಮುನೀರ್ ಕಾಟಿಪಳ್ಳ

ವಾಮಂಜೂರಿನಲ್ಲಿ ಆದಿವಾಸಿಗಳ ಅಧ್ಯಯನ ಶಿಬಿರ

ವಾರ್ತಾಭಾರತಿವಾರ್ತಾಭಾರತಿ5 Nov 2023 2:12 PM IST
share
ಬೆಂಗಳೂರು ಕಂಬಳದಲ್ಲಿ ಕೊರಗರ ಪನಿಕುಲ್ಲುನ ಅಜಲು ಆಚರಣೆಯ ಆತ್ಮವಿಮರ್ಶೆಯೂ ನಡೆಯುತ್ತದೆಯೇ?: ಮುನೀರ್ ಕಾಟಿಪಳ್ಳ

ಮಂಗಳೂರು: ತುಳುನಾಡಿನ ಜನಪ್ರಿಯ ಸಾಂಸ್ಕೃತಿಕ ಕ್ರೀಡೆ ಕಂಬಳವನ್ನು ವಿಶ್ವಕ್ಕೆ ಪರಿಚಯಿಸುವ ಉದ್ದೇಶದೊಂದಿಗೆ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೆಂಗಳೂರು ಕಂಬಳ ಹಮ್ಮಿಕೊಳ್ಳಲಾಗಿರುವುದು ಖುಷಿಯ ವಿಚಾರ. ಅದೇ ಸಂದರ್ಭ, ಈಗ ಅಜಲು ಪದ್ದತಿ ನಿಷೇಧದ ಕಾರಣಕ್ಕೆ ಕೈ ಬಿಡಲಾಗಿರುವ ತುಳುನಾಡಿನ ಅತ್ಯಂತ ತುಳಿತಕ್ಕೊಳಗಾದ ಮೂಲ ನಿವಾಸಿಗಳಾದ ಕೊರಗರನ್ನು 'ಪನಿ ಕುಲ್ಲಾವುನ' ಎಂಬ ಜಾತಿ, ಪಾಳೇಗಾರಿ ಶೋಷಣೆಯ ಕೆಟ್ಟ ಅಸ್ಪೃಶ್ಯ ಆಚರಣೆಯು ಕಂಬಳದ ಪ್ರಮುಖ ಭಾಗ ಆಗಿತ್ತು, ಕೊರಗ ಸಮುದಾಯವನ್ನು ಆ ಮೂಲಕ ಅತ್ಯಂತ ನಿಕೃಷ್ಟವಾಗಿ ಕಾಣಲಾಗುತ್ತಿತ್ತು ಎಂಬುದನ್ನು ನಾಡಿನ ಮುಂದೆ ವಿನೀತವಾಗಿ ಒಪ್ಪಿಕೊಳ್ಳುವ, ಆತ್ಮ ಶೋಧನೆ ನಡೆಸುವ ಕಾರ್ಯ ನಡೆಯಲಿದೆಯೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಶ್ನಿಸಿದರು.

ಅವರು ಮಂಗಳೂರಿನ ವಾಮಂಜೂರಿನಲ್ಲಿ "ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ" ಕೊರಗ ಸಮುದಾಯದ ಪ್ರಮುಖ ಕಾರ್ಯಕರ್ತರಿಗಾಗಿ ಹಮ್ಮಿಕೊಂಡಿದ್ದ ಒಂದು ದಿನದ ಸೈದ್ದಾಂತಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ಧರು.

ತುಳುನಾಡಿನ ಸಾಂಸ್ಕೃತಿಕ ಕ್ರೀಡಾ ವೈಭವವನ್ನು ರಾಜಧಾನಿಯಲ್ಲಿ ರಾಜಾಶ್ರಯದಲ್ಲಿ ಸಂಘಟಿಸುತ್ತಿರುವಾಗ ಕಂಬಳದ ಹೆಸರಿನಲ್ಲಿ ಅಜಲು ನಿಷೇಧ ಕಾನೂನು ಜಾರಿಗೆ ಬರುವವರೆಗೂ ಆಚರಿಸುತ್ತಿದ್ದ 'ಪನಿ ಕುಲ್ಲಾವುನ' ಎಂಬ ಅಮಾನುಷ ಜಾತಿ ದಮನ, ಶೋಷಣೆಯನ್ನು ಈ ಆಧುನಿಕ ಕಾಲಘಟ್ಟದಲ್ಲಿ ಮುಚ್ಚಿಡಬಾರದು. ಕಂಬಳದ ಹಿಂದಿನ ಸಾಯಂಕಾಲ ಸ್ಪರ್ಧೆಯ ಕೋಣಗಳು ಓಡುವ ಕಂಬಳದ ಕೆರೆಯಲ್ಲಿ ಗಾಜು, ಹರಿತ ಕಲ್ಲಿನ ಚೂರುಗಳನ್ನು ಪತ್ತೆ ಹಚ್ಚಲು ಕೊರಗ ಸಮುದಾಯದವರನ್ನು ಅದರಲ್ಲಿ ಓಡಿಸುತ್ತಿದ್ದದ್ದು, ರಾತ್ರಿಯಿಡೀ ಊರಿನ ಕೊರಗ ಬಂಧುಗಳು ಕರೆಯ ದಂಡೆಯಲ್ಲಿ ತಮ್ಮ ಸಾಂಪ್ರದಾಯಿಕ ಡೋಲು ಭಾರಿಸುತ್ತಾ ಕೆರೆಯನ್ನು ಕಾಯುತ್ತಾ ಕೂರುತ್ತಿದ್ದದ್ದು ಸಂಪ್ರದಾಯದ ಹೆಸರಿನಲ್ಲಿ ನಡೆಯುತ್ತಿದ್ದದ್ದು ಮರೆ ಮಾಚಲಾಗದ ವಾಸ್ತವ. ಅಜಲು ಪದ್ದತಿ ನಿಷೇಧದ ಕಾರಣಕ್ಕೆ ಇಂದು 'ಪನಿ ಕುಲ್ಲುನ' ಎಂಬ ಅಸ್ಪೃಶ್ಯತೆ ಆಚರಣೆ ಕೈ ಬಿಡಲಾಗಿದೆ. ಶಾಸನ ಸಭೆಯ ಪ್ರತಿನಿಧಿಗಳು, ಸಮಾಜದ ಗಣ್ಯರು ಆಯೋಜಿಸುತ್ತಿರುವ, ಸರಕಾರದ ಮುಖ್ಯಮಂತ್ರಿಗಳು, ಸಚಿವರು ಭಾಗಿಯಾಗುತ್ತಿರುವ, ಸರಕಾರದಿಂದ ಕೋಟಿ ರೂಪಾಯಿ ಅನುದಾನ ಪಡೆದಿರುವ ಬೆಂಗಳೂರು ಕಂಬಳದಲ್ಲಿ, ಕಂಬಳದ ಹೆಸರಿನಲ್ಲಿ ನಡೆದಿರುವ ಜಾತಿ ಶೋಷಣೆ, ಅಸ್ಪ್ರೃಶ್ಯತೆ ಆಚರಣೆಯೂ ಚರ್ಚೆಯಾಗುವುದು, ಪಾಪಪ್ರಜ್ಞೆಯಿಂದ ಒಪ್ಪಿಕೊಳ್ಳುವುದು ಬಹಳ ಮುಖ್ಯ‌. ಸಿನೆಮಾ, ಕ್ರೀಡಾ, ಉದ್ಯಮ, ರಾಜಕೀಯ ಕ್ಷೇತ್ರದ ರಾಷ್ಟ್ರ ಮಟ್ಟದ ಸೆಲೆಬ್ರಿಟಿಗಳು, ತಾರೆಗಳ ಜೊತೆ ತುಳುನಾಡಿನ ಕೊರಗ, ದಲಿತ ಸಮುದಾಯದ ಮುಖಂಡರಿಗೂ ವೇದಿಕೆಯಲ್ಲಿ ಅವಕಾಶ ಒದಗಿಸುವುದು, ಅವರ ಸಮ್ಮುಖದಲ್ಲೇ ಇತಿಹಾಸದಲ್ಲಿ ಆಗಿಹೋಗಿರುವ, ಶೋಷಣೆ, ಅನ್ಯಾಯಕ್ಕೆ ವಿಷಾದ ವ್ಯಕ್ತಪಡಿಸುವುದಕ್ಕೆ ಬಹಳ ಮಹತ್ವವಿದೆ. ಈ ಕುರಿತು ಕೊರಗ ಸಮುದಾಯದ ಯುವ ತಲೆಮಾರು ಧ್ವನಿ ಎತ್ತಬೇಕು, ಪ್ರಶ್ನಿಸಬೇಕು ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದರು.

ಬೆಂಗಳೂರು ಕಂಬಳಕ್ಕೆ ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ, ಬಲಾಢ್ಯ ಸಮುದಾಯಗಳ ಸಮ್ಮೇಳನಕ್ಕೆ ಅತಿಥಿಗಳಾಗಿ ಆಗಮಿಸುವ ಮುಖ್ಯಮಂತ್ರಿಗಳು ಕೊರಗರಂತಹ ಸರಾಸರಿ 45 ವರ್ಷಗಳ ಆಯಸ್ಸು ಮಾತ್ರ ಹೊಂದಿರುವ ತುಳುನಾಡಿನ ಮೂಲ ನಿವಾಸಿಗಳು, ಅಮಾನುಷ ಜಾತಿ ದೌರ್ಜನ್ಯಕ್ಕೆ ಗುರಿಯಾದ ಸಮುದಾಯದ ಬಳಿಗೆ ಬರುವುದು ಯಾವಾಗ, ಅವರ ಕನಿಷ್ಟ ಬೇಡಿಕೆಗಳಿಗೆ ಅನುದಾನ ಬಿಡುಗಡೆ ಮಾಡುವುದು ಯಾವಾಗ, ಡಾ. ಮಹಮ್ಮದ್ ಪೀರ್ ವರದಿಯಂತೆ ಕೊರಗ ಕುಟುಂಬಗಳಿಗೆ ಎರಡೂವರೆ ಎಕರೆ ಕೃಷಿ ಭೂಮಿ ನೀಡುವುದು ಯಾವಾಗ ?ಮುಖ್ಯಮಂತ್ರಿ, ಸಚಿವರುಗಳು ಬಿಡಿ ಪಂಚಾಯತ್ ಸದಸ್ಯರುಗಳಾದರೂ ಕೊರಗರಂತಹ ಆದಿವಾಸಿಗಳ ಕಾಲೋನಿ ಕಡೆಗೆ ತಲೆ ಹಾಕುತ್ತಾರೆಯೆ ಎಂದು ಮುನೀರ್ ಕಾಟಿಪಳ್ಳ ವಿಷಾದ ವ್ಯಕ್ತಪಡಿಸಿದರು. ದಮನಿತ ಸಮುದಾಯಗಳು ಒಂದಾಗದೆ, ಸೈದ್ದಾಂತಿಕ ತಿಳುವಳಿಕೆ, ಬದ್ದತೆಯೊಂದಿಗೆ ಸಂಘರ್ಷಕ್ಕಿಳಿಯದೆ ವ್ಯವಸ್ಥೆ ತಮ್ಮ ಕಡೆಗೆ ತಿರುಗಿ ನೋಡುವುದಿಲ್ಲ ಎಂದು ಹೇಳಿದರು.

ಉದ್ಘಾಟನಾ ಘೋಷ್ಟಿಯ ಆದ್ಯಕ್ಷತೆಯನ್ನು ಕರಿಯ ಕೊರಗ ವಹಿಸಿದ್ದರು. ಡಾ. ಕೃಷ್ಣಪ್ಪ ಕೊಂಚಾಡಿ ಪ್ರಾಸ್ತಾವಿಕವಾಗಿ ಮಾತಾಡಿದರು, ಜಿಲ್ಲಾ ಮುಂದಾಳು ರಶ್ಮಿ ವಾಮಂಜೂರು, ರಾಜ್ಯ ಸಮಿತಿ ಸದಸ್ಯ ಕೃಷ್ಣ ಇನ್ನಾ, ಶೇಖರ್ ಮಂಗಳಜ್ಯೋತಿ, ನೌಕರರರ ಉಪ ಸಮಿತಿ ಸಂಚಾಲಕ ಜಯ ಸುರತ್ಕಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುನೀತ್ ವಾಮಂಜೂರು ಸ್ವಾಗತಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X