ದಾವಣಗೆರೆ | ಧರ್ಮಸ್ಥಳ ಅಸಹಜ ಸಾವು ಪ್ರಕರಣ; ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಒತ್ತಾಯಿಸಿ ಧರಣಿ

ದಾವಣಗೆರೆ, ಅ.9 : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ಮತ್ತು ಅದರ ಸುತ್ತಲಿನ ಪ್ರದೇಶಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದವರು ಯಾರು ಎಂಬ ಸತ್ಯವನ್ನು ಪತ್ತೆ ಹಚ್ಚಿ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ವಿಧಿಸಬೇಕೆಂದು ದಶಕಗಳಿಂದಲೂ ಹೋರಾಟ ನಡೆಸುತ್ತಿರುವ ಸಂತ್ರಸ್ತರ ಕುಟುಂಬಗಳಿಗೆ ನ್ಯಾಯ ಒದಗಿಸಬೇಕೆಂದು ದಾವಣಗೆರೆ ಜಿಲ್ಲೆಯ ಮಹಿಳಾ ಸಂಘಟನೆಗಳು ಸರಕಾರವನ್ನು ಆಗ್ರಹಿಸಿದೆ.
ಅಖಿಲ ಭಾರತ ರಾಷ್ಟ್ರೀಯ ಮಹಿಳಾ ಒಕ್ಕೂಟ, ನೆರಳು ಬೀಡಿ ಕಾರ್ಮಿಕರ ಸಂಘಟನೆ ಮತ್ತು ಮಹಿಳಾ ಮುನ್ನಡೆ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ಜಯದೇವ ಸರ್ಕಲ್‌ನಲ್ಲಿ ಧರಣಿ ನಡೆಯಿತು.
ಭಾರತ ಮಹಿಳಾ ಒಕ್ಕೂಟದ ಜಿಲ್ಲಾಧ್ಯಕ್ಷೆ ಸರೋಜಾ, ನಿರ್ಮಲಾ, ಮಂಜುಳಾ, ಗೀತಾ, ಹುಲಿಗೆಮ್ಮ ರಮೀ, ಜಬಿ, ಪಾಪಮ್ಮ, ಲತಾ, ಪ್ರೇಮಬಾಯಿ, ಜಯಮ್ಮ, ಜಬೀನ ಖಾನಂ, ಕರಿಬಸಪ್ಪ ನಾಜಿಮಾ, ನೂರ್ ಫಾತೀಮಾ, ಜಮೀರ್, ಉನ್ನಿಸಾ ರೇಷ್ಮಾ ಬದ್ರೂನ್, ಸೈಯದ್ ಸಲ್ಮಾ ಆವರಗೆರೆ ಚಂದ್ರು, ಎಚ್.ಜಿ.ಉಮೇಶ್, ಐರಣಿ ಚಂದ್ರು, ಎ.ತಿಪ್ಪೇಶ್ ರಾಜು, ಎಲ್ಲಪ್ಪ, ಶೇಖರ ನಾಯಕ, ಸತೀಶ್ ಅರವಿಂದ್ ಇದ್ದರು.





