ದಾವಣಗೆರೆ ದಕ್ಷಿಣ ಉಪಚುನಾವಣೆ: 11 ಅಭ್ಯರ್ಥಿಗಳಿಂದ ನಾಮಪತ್ರ ವಾಪಸ್

ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಉಮೇದುವಾರಿಕೆ ಸಲ್ಲಿಸಿದ್ದ 11 ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಅಧಿಕೃತವಾಗಿ ಹಿಂಪಡೆದಿದ್ದಾರೆ ಎಂದು ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಗುರುವಾರ ನಾಮಪತ್ರ ಹಿಂಪಡೆಯಲು ನಿಗದಿಪಡಿಸಿದ ಅಂತಿಮ ಅವಧಿಯೊಳಗೆ ಈ ಕೆಳಗಿನ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ವಾಪಸ್ ಪಡೆದಿದ್ದಾರೆ:
ಆನಂದ ಎನ್. ಎಲ್,ಸುಭಾನ್ ಖಾನ್,ಎಚ್. ಫಾರೂಕ್ ,ಅಲ್ಲಾಭಕ್ಷ್ ಬಿ. , ಅಮೀರ್ ಅಹಮದ್ ಖಾನ್, ಇನಾಯತ್ ಉಲ್ಲಾ , ಎಸ್. ಕೆ. ಅಬ್ದುಲ್ ಖಾನ್,ಎಸ್. ಸಿ. ತ್ರಿಮೂರ್ತಿ, ಮುಜಾಹಿದ್ ಉಲ್ಲಾ ,ಸೈಯದ್ ಉಲ್ಲಾ, ಬಿ. ಕುಮಾರಸ್ವಾಮಿ ನಾಮಪತ್ರ ವಾಪಾಸ್ ಪಡೆದಿದ್ದಾರೆ.
ನಾಮಪತ್ರ ಹಿಂಪಡೆಯದ ಸಾದಿಕ್ ಪೈಲ್ವಾನ್ :
ಒಂದೆಡೆ 11 ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದರೂ, ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರು ತಮ್ಮ ನಾಮಪತ್ರವನ್ನು ಹಿಂಪಡೆಯದೆ, ಕಣದಲ್ಲಿ ಉಳಿದಿರುವುದು ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಬಂಡಾಯ ಅಭ್ಯರ್ಥಿಯ ಈ ನಿರ್ಧಾರವು ಕ್ಷೇತ್ರದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯ ಮತಗಳ ಮೇಲೆ ಪ್ರಭಾವ ಬೀರಬಹುದು ಎಂಬ ಆತಂಕ ಪಕ್ಷದ ವಲಯದಲ್ಲಿ ವ್ಯಕ್ತವಾಗುತ್ತಿದೆ.
39 ಅಭ್ಯರ್ಥಿ ಗಳು 45 ನಾಮಪತ್ರ ಸಲ್ಲಿಸಿದರು. ಪರಿಶೀಲನೆ ವೇಳೆ 3 ಜನರ ನಾಮಪತ್ರ ಅಸಿಂಧುಗೊಂಡಿದ್ದು, ಇದೀಗ 11 ಜನ ವಾಪಾಸ್ ಪಡೆದಿದ್ದಾರೆ.






