Davangere | ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್‌ಶಿಪ್

ಕಟಾ, ಕುಮಿಟೆ ವಿಭಾಗದಲ್ಲಿ ಮುಹಮ್ಮದ್ ಶಹಾದ್ ಸಾಧನೆ
ದಾವಣಗೆರೆ, ಜು.7: ನಗರದ ಡಾ.ನಾಗಮ್ಮ ಕೇಶವ ಮೂರ್ತಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ 1ನೇ ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಮುಹಮ್ಮದ್ ಶಹಾದ್ ಕಟಾದಲ್ಲಿ 3ನೇ ಮತ್ತು ಕುಮಿಟೆ ವಿಭಾಗದಲ್ಲಿ 2ನೇ ಸ್ಥಾನ ಪಡೆದಿದ್ದಾರೆ.
ಮುಹಮ್ಮದ್ ಶಹಾದ್ ಅದ್ಯಪಾಡಿ ಸಾದಿಕ್ ಮುಹಮ್ಮದ್ ಹಾಗೂ ನೌಶಿದಾ ದಂಪತಿಯ ಪುತ್ರನಾಗಿದ್ದು, ಬಜ್ಪೆ ಮಾರ್ನಿಂಗ್ ಸ್ಟಾರ್ ಸ್ಕೂಲ್‌ನ 5ನೇ ತರಗತಿ ವಿದ್ಯಾರ್ಥಿ. ಸೆನ್ಸಿ ಕೇವಲ್ ಕುಮಾರ್ ಅವರಿಂದ ತರಬೇತಿ ಪಡೆದಿದ್ದಾನೆ. ಬಾಲಕನ ಸಾಧನೆಗೆ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.
Next Story




