ದಾವಣಗೆರೆ| ಚಲಿಸುತ್ತಿದ್ದ ರೈಲಿನಲ್ಲಿ ಕಳ್ಳತನ ಪ್ರಕರಣ: ಆರೋಪಿಯ ಬಂಧನ; 3.43 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಲ್ಯಾಪ್‌ಟಾಪ್ ವಶ

ದಾವಣಗೆರೆ: ಚಲಿಸುವ ರೈಲಿನಲ್ಲಿ ಪ್ರಯಾಣಿಕರೊಬ್ಬರ ಚಿನ್ನಾಭರಣ, ಲ್ಯಾಪ್‌ಟಾಪ್ ಕಳ್ಳತನ ಮಾಡಿದ್ದ ಆರೋಪಿಯನ್ನು ಆರ್ ಪಿಎಒಫ್ ಮತ್ತು ಜಿಆರ್ ಪಿ ಪೊಲೀಸರು ಬಂಧಿಸಿ 3.43 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಲ್ಯಾಪ್‌ಟಾಪ್ ವಶಪಡಿಸಿಕೊಂಡಿದ್ದಾರೆ.
ಮುಹಮ್ಮದ್ ಅಮ್ಜದ್ ಬಂಧಿತ ಆರೋಪಿ.
ಕಳೆದ ಡಿ.21ರಂದು ಬೆಂಗಳೂರಿನಿಂದ ಬೆಳಗಾವಿಗೆ ಹೊರಟ್ಟಿದ್ದ ಎಕ್ಸ್ ಪ್ರೆಸ್ ರೈಲಿನಲ್ಲಿ ಹುಬ್ಬಳ್ಳಿಯ ಮೇಲುಗಿರಿ ಶಿರೂರ್ ಪಾಕ್೯ ಸಮೀಪದ ನಿವಾಸಿ ಎಂ.ವಿನಯ್ ಪ್ರಯಾಣಿಸುತ್ತಿದ್ದಾಗ ಅವರ ಬಳಿಯಿದ್ದ 3.43 ಲಕ್ಷ ರೂ. ಮೌಲ್ಯದ ಮೊಬೈಲ್, ಲ್ಯಾಪ್‌ಟಾಪ್ ಹಾಗೂ ಚಿನ್ನಾಭರಣಗಳನ್ನು ಕಳ್ಳತನ ಮಾಡಲಾಗಿದೆ.
ಈ ಬಗ್ಗೆ ಆನ್ ಲೈನ್ ಮೂಲಕ ಆರ್ ಪಿಎಫ್ ಠಾಣೆಗೆ ದೂರು ನೀಡಲಾಗಿತ್ತು.
ಈ ಕುರಿತು ಜಿಆರ್ ಪಿ ಇನ್ಸ್ ಪೆಕ್ಟರ್ ಕೃಷ್ಣ ನಾಯಕ್ ಹಾಗೂ ಆರ್ ಪಿಎಫ್ ಇನ್ಸ್ ಪೆಕ್ಟರ್ ರಂಜನ್ ಕುಮಾರ್ ಭಾರಾಧ್ವಜ ನೇತೃತ್ವದ ಜಂಟಿ ತಂಡ ಪರಿಶೀಲಿಸಿ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮುಹಮ್ಮದ್ ಅಮ್ಜದ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ.
Next Story





