Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಾವಣಗೆರೆ
  4. ಎಲ್ಲ ಕ್ಷೇತ್ರಗಳಿಗೂ ಆವರಿಸಿದ ಮನಸ್ಸಿನ...

ಎಲ್ಲ ಕ್ಷೇತ್ರಗಳಿಗೂ ಆವರಿಸಿದ ಮನಸ್ಸಿನ ಅಸ್ಪೃಶ್ಯತೆ : ದಿನೇಶ್ ಅಮಿನ್ ಮಟ್ಟು

‘ಮುಟ್ಟಿಸಿಕೊಂಡವರು’ ಪುಸ್ತಕ ಬಿಡುಗಡೆ

ವಾರ್ತಾಭಾರತಿವಾರ್ತಾಭಾರತಿ14 Jun 2025 10:45 PM IST
share
ಎಲ್ಲ  ಕ್ಷೇತ್ರಗಳಿಗೂ ಆವರಿಸಿದ ಮನಸ್ಸಿನ ಅಸ್ಪೃಶ್ಯತೆ : ದಿನೇಶ್ ಅಮಿನ್ ಮಟ್ಟು

ದಾವಣಗೆರೆ: ಮನಸ್ಸಿನ ಅಸ್ಪೃಶ್ಯತೆ ಎಲ್ಲ ಕ್ಷೇತ್ರಗಳಲ್ಲಿ ಆವರಿಸಿದ್ದು, ಇದರಿಂದ ಹೆಚ್ಚು ಬಳಲುತ್ತಿರುವವರು ಮಹಿಳೆಯರು ಎಂದು ಹಿರಿಯ ಪತ್ರಕರ್ತ ಹಾಗೂ ಚಿಂತಕ ದಿನೇಶ್ ಅಮಿನ್ ಮಟ್ಟು ಹೇಳಿದ್ದಾರೆ.

ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಬೀ ಕಲ್ಚರ್ ಪ್ರಕಾಶನ-ಬೆಂಗಳೂರು ವತಿಯಿಂದ ಡಾ.ಬಿ.ಎಂ.ತಿಪ್ಪೇಸ್ವಾಮಿ ಜನ್ಮಶತಮಾನೋತ್ಸವ ಅಂಗವಾಗಿ ನೇತ್ರ ತಜ್ಞ ಡಾ.ಬಿ.ಎಂ.ತಿಪ್ಪೇಸ್ವಾಮಿ ಅವರ ಬದುಕಿನ ಕುರಿತು ಲೇಖಕಿ ಬಿ.ಟಿ.ಜಾಹ್ನವಿ ಅವರ ಸಂಪಾದಿತ ಕೃತಿ ‘ಮುಟ್ಟಿಸಿಕೊಂಡವರು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಎರಡು ರೀತಿಯ ಅಸ್ಪೃಶ್ಯತೆ ಇದೆ. ಒಂದು ಮುಟ್ಟುವುದು, ಇನ್ನೊಂದು ಮುಟ್ಟದೇ ಇರುವುದು. ಈಗ ಊಟ, ತಿಂಡಿ ಸೇವನೆಯಲ್ಲಿ ಯಾವುದೇ ಜಾತಿ ಲೆಕ್ಕಿಸದೆ ಎಲ್ಲರೂ ಒಬ್ಬರನ್ನೊಬ್ಬರು ಬೆರೆಯುವುದನ್ನು ಕಾಣಬಹುದು. ಆದರೆ, ಮನಸ್ಸಿನ ಒಳಗಡೆ ಇರುವ ಅಸ್ಪೃಶ್ಯತೆ ಹೆಚ್ಚಾಗಿದೆ. ಅಂದರೆ ಮಾನಸಿಕವಾಗಿ ಅವರನ್ನು ಸೀಮಿತಗೊಳಿಸುವುದು. ಇದು ಎಲ್ಲ ಕ್ಷೇತ್ರದಲ್ಲಿಯೂ ವ್ಯಾಪಿಸಿದ್ದು, ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರು ಇದಕ್ಕೆ ತುತ್ತಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಮಾಜಿ ಶಾಸಕ, ನೇತ್ರತಜ್ಞ ಡಾ.ಬಿ.ಎಂ.ತಿಪ್ಪೇಸ್ವಾಮಿ ಅವರು ಸಹ ಅಂಬೇಡ್ಕರ್ ಮಾದರಿಯಲ್ಲಿಯೇ ಶಿಕ್ಷಣ ಪಡೆದಿದ್ದಾರೆ. ದೌರ್ಜನ್ಯ, ನಿರ್ಲಕ್ಷ್ಯ, ಅವಮಾನವನ್ನು ಸಹಿಸಿ ಸಾಧಿಸುವುದು ಬಹಳ ಕಷ್ಟ. ಹಾಗಿದ್ದರೂ ಅವರು ಭಿನ್ನವಾಗಿ ನಿಂತು ಸಾಧನೆ ಮಾಡಿ ತೋರಿಸಿದರು. ತಿಪ್ಪೇಸ್ವಾಮಿ ಅವರಲ್ಲಿ ವೃತ್ತಿ ಧರ್ಮ ಇತ್ತು ಎಂದು ಪ್ರಶಂಸಿಸಿದರು.

ದಲಿತರನ್ನು ಸಮಾಜದ ಮುನ್ನೆಲೆಗೆ ತರಲು ಎರಡೇ ದಾರಿಗಳಿವೆ. ಒಂದು ಸಂಧಾನ, ಇನ್ನೊಂದು ಸಂಘರ್ಷ. ಆದರೆ, ಬಹಳಷ್ಟು ಮಂದಿ ದಲಿತರಿಗೆ ಸಮಾನ ಅವಕಾಶ ಕಲ್ಪಿಸಲು ಸಂಘರ್ಷವನ್ನು ಆಯ್ಕೆ ಮಾಡಿಕೊಂಡರೆ, ತಿಪ್ಪೇಸ್ವಾಮಿ ಅವರು ಸಂಧಾನವನ್ನು ಆಯ್ಕೆ ಮಾಡಿಕೊಂಡಿದ್ದರು ಎಂದರು.

ಪತ್ರಕರ್ತೆ ಪ್ರೀತಿ ನಾಗರಾಜ್ ಮಾತನಾಡಿ, ಒಬ್ಬ ಮಗಳು ತಂದೆಗೆ ಕೊಡುವ ಗಿಫ್ಟ್ ಎಂದರೆ ಅವರನ್ನು ಸದಾ ಸ್ಮರಣೆಯಲ್ಲಿಡುವುದು. ಅದನ್ನು ಜಾಹ್ನವಿ ಮಾಡಿದ್ದಾರೆ. ಭ್ರಷ್ಟತೆಗಾಗಿ, ಹಣಕ್ಕಾಗಿ ಎಂದೂ ಕೈಚಾಚದ ಅವರ ತಂದೆ ತಿಪ್ಪೇಸ್ವಾಮಿ ಅವರನ್ನು ಪುಸ್ತಕದ ಮೂಲಕ ಜೀವಂತವಿಟ್ಟಿರುವುದು ಶ್ಲಾಘನೀಯ ಎಂದರು.

ನೇತ್ರ ತಜ್ಞ ಹಾಗೂ ಸಿದ್ಧ ಕೃಷಿ ಪ್ರಚಾರಕ ಡಾ.ಆರ್.ರಂಗನಾಥ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿ.ಟಿ. ಜಾಹ್ನವಿ ಪ್ರಾಸ್ತಾವಿಕವಾಗಿ ನುಡಿದರು. ಮುಖ್ಯ ಅತಿಥಿಗಳಾಗಿ ಲೇಖಕರು ಮತ್ತು ಸಾಮಾಜಿಕ ಹೋರಾಟಗಾರಾದ ವಿ.ಎಲ್. ನರಸಿಂಹಮೂರ್ತಿ, ಎಸ್. ವಿಷ್ಣುಕುಮಾರ್ ಉಪಸ್ಥಿತರಿದ್ದರು.

ದಲಿತರಿಗೆ ಸಮಾನ ಮೀಸಲಾತಿ ಸಿಕ್ಕಿಲ್ಲ :

ತಿಪ್ಪೇಸ್ವಾಮಿ ಅವರು ಮೀಸಲಾತಿಗೆ ಮಿತಿಯಿರಬೇಕು, ಒಂದು ತಲೆಮಾರಿನ ನಂತರ ಮುಂದುವರಿಸಬಾರದು ಎಂದು ಹೇಳಿ ಅವರು ವಿವಾದ ಮಾಡಿಕೊಂಡಿದ್ದರು. ಈ ವಿಚಾರವಾಗಿ ನನಗೂ ವಿರೋಧವಿದೆ. ಏಕೆಂದರೆ ಶಿಕ್ಷಣ ಮತ್ತು ರಾಜಕೀಯದಲ್ಲಿ ಇಂದಿನವರೆಗೂ ದಲಿತರಿಗೆ ಸಮಾನ ಮೀಸಲಾತಿ ಸಿಕ್ಕಿಲ್ಲ ಎಂದು ಚಿಂತಕ ದಿನೇಶ್ ಅಮಿನ್ ಮಟ್ಟು ಹೇಳಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X