ದಾವಣಗೆರೆ : ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ

ದಾವಣಗೆರೆ : ಸಂವಿಧಾನ ವಿರೋಧಿಯಾಗಿ ಸರಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಕಾನೂನನ್ನು ವಿರೋಧಿಸಿ ಹಾಗೂ ಹಿಂಪಡೆಯಲು ಆಗ್ರಹಿಸಿ, ದೇಶಾದ್ಯಂತ ಮಾನವ ಸರಪಳಿ ನಿರ್ಮಿಸಿ ಪ್ರತಿರೋಧಿಸಲು ಕರೆ ನೀಡಿದ ಹಿನ್ನೆಲೆ ಯಲ್ಲಿಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್, ದಾವಣಗೆರೆ ತಂಝೀಮ್ ಉಲ್‌ಮುಸ್ಲಿಮೀನ್ ಫಂಡ್ ಅಸೋಸಿಯೇಷನ್ ವತಿಯಿಂದ ನಗರದ ಮದೀನ ಮಸೀದಿಯಲ್ಲಿ ಶುಕ್ರವಾರ ಪಿ.ಬಿ.ರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮೌಲಾನ ನಾಸಿರ್ ಅಹ್ಮದ್, ತಂಝೀಮ್ ಅಧ್ಯಕ್ಷರಾದ ದಾದು ಸೇಟ್, ಶಂಸುದ್ದೀನ್ ರಝ್ವಿ, ಕಾರ್ಯದರ್ಶಿ ಮುಹಮ್ಮದ್ ಝಬಿಉಲ್ಲಾ, ಸಾಬಿರ್ ಅಲಿ, ಖಾದರ್ ಬಾಷ ರಝ್ವಿ, ವಕೀಲ ಶೌಕತ್ ಅಲಿ, ಮಟನ್ ಮುಹಮ್ಮದ್ ಅಲಿ, ಇಮ್ರಾನ್ ರಝಾ ಝಬಿವುಲ್ಲಾ ವೈ, ಜಬಿ ಟೈಲ್ಸ್ ಸೈಯದ್ ರಫೀಕ್ ಸಾಬ್, ದಾದಾಪೀರ್ (ಶೆಕರಪ್ಪ), ಸನಾವುಲ್ಲಾ, ಶಾನವಾಝ್ ಖಾನ್, ನೂರ್ ಅಹ್ಮದ್, ಝಾಕಿರ್ ಅರ್ಚನ, ಮುಸ್ತಾಖ್, ಎನ್.ಆರ್.ರಫಿ, ಸೈಯದ್ ಸೈಫುಲ್ಲಾ, ಕೆ.ಸಿ.ಮುಹಮ್ಮದ್, ಸೈಯದ್ ಇಮ್ತಿಯಾಝ್, ಸಲೀಂ ಸಾಗರ್, ಮುಹಮ್ಮದ್ ಜಾಬಿರ್, ಅಬೂ ಸ್ವಾಲೆಹಾ, ಬರ್ಕತ್ ಹಬೀಬ್ ಹಾಗೂ ಇತರರು ಪಾಲ್ಗೊಂಡಿದ್ದರು