ನಾರಾಯಣ ಭಟ್

ಉಡುಪಿ, ಆ.19: ಬಡಾನಿಡಿಯೂರು ಪೌಂಜಿಗುಡ್ಡೆ ನಿವಾಸಿ ನಾರಾಯಣ ಭಟ್(71) ಇಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಉದ್ಯೋಗಿಯಾಗಿದ್ದ ಇವರು ವಡಭಾಂಡೇಶ್ವರ ಶ್ರೀಬಲರಾಮ ದೇವಸ್ಥಾನ, ಬೆಳ್ಕಳೆ ಶ್ರೀಮಹಾಲಿಂಗೇಶ್ವರ ಮುಂತಾದ ದೇವಸ್ಥಾನಗಳಲ್ಲಿ ಸಕ್ರಿಯ ಸದಸ್ಯರಾಗಿ, ಸಹಾಯಕರಾಗಿಯೂ ನಿರತರಾಗಿ ದ್ದರು. ಮೃತರು ಪತ್ನಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ವಡಭಾಂಡೇಶ್ವರ ದೇವಸ್ಥಾನದ ಅಭಿವೃದ್ಧಿ ಸಮಿತಿ ಹಾಗೂ ತೋನ್ಸೆ ಬ್ರಾಹ್ಮಣ ವಲಯ ಸಮಿತಿಯು ತೀವ್ರ ಸಂತಾಪ ವ್ಯಕ್ತ ಪಡಿಸಿದೆ.
Next Story





