ಶಿರ್ವ, ಸೆ.19: ಶಿರ್ವ ಸಮೀಪದ ಪಾಲಮೆ ಕಾವೇರಿಬೆಟ್ಟು ದಿ.ಸಂಜೀವ ನಾಯಕ್(ಪಾಟ್ಕರ್)ರವರ ಪುತ್ರ ಸೀತಾರಾಮ ನಾಯಕ್(65) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.
ಪ್ರಗತಿಪರ ಕೃಷಿಕರು ಹಾಗೂ ಪಾಕತಜ್ಞರಾಗಿ ಜನಾನುರಾಗಿಯಾಗಿದ್ದರು. ಅವರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.