ವೇದವ್ಯಾಸ ಆಚಾರ್ಯ

ಉಡುಪಿ, ಸೆ.29: ಪಾಂಗಾಳ ಶ್ರೀಜನಾರ್ದನ ದೇವಳದ ಪತ್ರಪಾಣಿ ವೇದವ್ಯಾಸ ಆಚಾರ್ಯ (91) ಇತ್ತೀಚೆಗೆ ಬೆಂಗಳೂರಿನಲ್ಲಿ ತಮ್ಮ ಪುತ್ರನ ಮನೆಯಲ್ಲಿ ನಿಧನ ಹೊಂದಿದರು.
ನಾಲ್ಕು ದಶಕಗಳ ಕಾಲ ಕಟಪಾಡಿಯ ಶ್ರೀ ಮಹಾಲಿಂಗೇಶ್ವರ ದೇವಳದ ಅರ್ಚಕರಾಗಿ ಸೇವೆ ಸಲ್ಲಿಸಿದ ಇವರು ಉಂಡಾರು ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿಯೂ ಕಾರ್ಯನಿರ್ವಸಿದ್ದರು. ವೈದಿಕ ವೃತ್ತಿಯನ್ನು ಶೃದ್ಧೆಯಿಂದ ನಿರ್ವಹಿಸುತ್ತಿದ್ದ ಇವರು ಮೂವರು ಪುತ್ರರನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Next Story





