ಅನಂತ ಕೃಷ್ಣಪ್ರಸಾದ್
ಉಡುಪಿ, ಅ. 8: ಪರ್ಯಾಯ ಶ್ರೀಪುತ್ತಿಗೆ ಮಠದ ಅಧಿಕಾರಿ ಅನಂತಕೃಷ್ಣ ಪ್ರಸಾದ(45) ಮಂಗಳವಾರ ನಿಧನರಾದರು.
ಇವರು ಉಡುಪಿ ರಥಬೀದಿಯ ಶ್ರೀರಾಘವೇಂದ್ರ ಮಠಕ್ಕೆ ಭೇಟಿ ನೀಡಿದ ಈ ಸಂದರ್ಭ ಕುಸಿದು ಬಿದ್ದು ಪ್ರಜ್ಞಾಹಿನ ಸ್ಥಿತಿಗೆ ತಲುಪಿದರು. ತಕ್ಷಣ ಸಮಾಜ ಸೇವಕ ನಿತ್ಯಾನಂದ ಒಳಕಾಡು ಆಗಮಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು.
ಸುಬ್ರಹ್ಮಣ್ಯ ಮೂಲದವರಾದ ಅನಂತಕೃಷ್ಣರು ಕೋಟಿ ಗೀತಾ ಲೇಖನ ಯಜ್ಞದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಮೃತರು ತಂದೆ, ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
Next Story





