ಜಯಂತಿ ಕೆ. ಭಟ್
ಉಡುಪಿ, ಅ.25: ದಿ.ಪ್ರೊ. ಹೆರಂಜೆ ಕೃಷ್ಣ ಭಟ್ಟರ ಪತ್ನಿ ಜಯಂತಿ ಭಟ್ (75) ಶನಿವಾರ ಬೆಳಗ್ಗೆ ಉಡುಪಿ ವಿಬುಧಪ್ರಿಯ ತೀರ್ಥ ನಗರದ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಅವರು ಭಜನಾ ಸತ್ಗಂಗ ಮೊದಲಾದವುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಕ್ರಿಯರಾಗಿದ್ದರು. ಕಡಿಯಾಳಿ ಮಾತೃ ಮಂಡಳಿಯ ಸ್ಥಾಪಕರಾಗಿದ್ದು, ಇಂದ್ರಾಳಿ ಆದಿಶಕ್ತಿ ಭಜನಾ ಮಂಡಳಿಯ ಸಕ್ರಿಯ ಸದಸ್ಯರಾಗಿದ್ದರು. ಪ್ರಸಿದ್ಧ ಜ್ಯೋತಿಷಿ ಕಬ್ಯಾಡಿ ಶ್ರೀನಿವಾಸ ಆಚಾರ್ಯರ ಪುತ್ರಿಯಾದ ಇವರು ಇತ್ತೀಚೆಗಷ್ಟೆ ನಿಧನರಾಗಿದ್ದ ತಮ್ಮ ಪತಿ ಪ್ರೊ. ಎಚ್ ಕೃಷ್ಣ ಭಟ್ಟರು ಕೈಗೊಳ್ಳುತ್ತಿದ್ದ ಎಲ್ಲಾ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ತುಂಬು ಸಹಕಾರ ಮತ್ತು ಪ್ರೋತ್ಸಾಹ ನೀಡುತ್ತಿದ್ದರು. ಮೃತರು ಓರ್ವ ಪುತ್ರ ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.
Next Story





