ಅರ್ಥಧಾರಿ ಶಂಭು ಶರ್ಮ

ಮಂಗಳೂರು, ನ.1: ಕುಂಬಳೆ ಎಡನಾಡು ಮೂಲದ ವಿಟ್ಲ ಶಂಭು ಶರ್ಮ (74) ಶನಿವಾರ ನಿಧನರಾದರು.
ಪತ್ನಿ, ಪುತ್ರ ಹಾಗೂ ಅಪಾರ ಅಭಿಮಾನಿಗಳನ್ನು ಮೃತರು ಅಗಲಿದ್ದಾರೆ.
ಉಪನ್ಯಾಸಕರಾಗಿದ್ದ ಅವರು ಅರ್ಥಧಾರಿ, ವೇಷಧಾರಿಯಾಗಿದ್ದ ಅವರು ತರ್ಕಪೂರ್ಣ ಅರ್ಥಗಾರಿಕೆ, ವಿಶಿಷ್ಟ ಸ್ವರಶಕ್ತಿಯಿಂದ ಕಲಾಭಿಮಾನಿಗಳ ಮೆಚ್ಚುಗೆ ಗಳಿಸಿದ್ದರು. ಪೆರ್ಲಕೃಷ್ಣ ಭಟ್ ನೆನಪಿನ ’ಯಕ್ಷಗಾನ ಕಲಾರಂಗ’ ಪ್ರಶಸ್ತಿ ಲಭಿಸಿತ್ತು.
*ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ವ್ಯಕ್ತ ಪಡಿಸಿದ್ದಾರೆ.
Next Story





