ಜಾರಪ್ಪ ಪೂಜಾರಿ

ಮೂಡುಬಿದಿರೆ : ಎರಡೂ ಕಣ್ಣುಗಳ ದೃಷ್ಠಿ ಕಳೆದುಕೊಂಡಿದ್ದರೂ ಊರುಗೋಲನ್ನೇ ನಂಬಿ ಕೃಷಿ ಚಟುವಟಿಕೆ ಮಾಡಿ ಉತ್ತಮ ಫಸಲನ್ನು ಪಡೆಯುತ್ತಿದ್ದ ಅತ್ಯುತ್ತಮ ಕೃಷಿಕ, ಶಿರ್ತಾಡಿ ಕಂದಿರು ಮನೆಯ ಜಾರಪ್ಪ ಪೂಜಾರಿ ( 69) ಅವರು ಶನಿವಾರ ನಿಧನರಾಗಿದ್ದಾರೆ.
ಕಂದಿರುವಿನ ಜೆ.ಎನ್.ಎಸ್.ಕನ್ಸ್ಟ್ರಕ್ಷನ್ಸ್ ನ ಸುರೇಂದ್ರ ಕೆ.ಅವರ ತಂದೆಯಾಗಿರುವ ಅವರು ತನ್ನ ಕೃಷಿಗಾಗಿ ಹಲವು ಕಡೆ ಸನ್ಮಾನಗೊಂಡಿದ್ದರು.
ದೃಷ್ಟಿದೋಷವಿದ್ದರೂ ತಾನು ಇಷ್ಟ ಪಡುತ್ತಿದ್ದ ಕೃಷಿ ಚಟುವಟಿಕೆಯನ್ನು ಬಿಡದೆ ಇತ್ತೀಚಿನವರೆಗೂ ಊರುಗೋಲಿನ ಸಹಾಯದಿಂದ ಗದ್ದೆ, ತೋಟಕ್ಕೆ ಹೋಗಿ ಕೃಷಿ ಚಟುವಟಿಕೆ ನಡೆಸುತ್ತಿದ್ದರು.
Next Story





