ಪೂರ್ಣಿಮಾ ಆರ್. ಮಾಡ

ಉಡುಪಿ, ಮೇ 2: ಮುಂಬೈನ ಕೇಬಲ್ ಕಾರ್ಪೋರೇಶನ್ ಆಫ್ ಇಂಡಿಯಾ ಕಂಪನಿಯ ಉದ್ಯೋಗಿಯಾಗಿದ್ದ ದಿ. ರಮಾನಾಥ ಎಸ್. ಮಾಡ ಅವರ ಪತ್ನಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಗಾಂಧಿವಾದಿ ದಿ.ಮುದ್ರಾಡಿ ಕೃಷ್ಣಯ್ಯ ಶೆಟ್ಟಿಯ ಪುತ್ರಿ ಆತ್ರಾಡಿ ಬೀರ್ಬೆಟ್ಟು ಮನೆ ಪೂರ್ಣಿಮಾ ಆರ್.ಮಾಡ(81) ಮೇ 1ರಂದು ಮುಂಬೈಯ ಸ್ವಗೃಹದಲ್ಲಿ ನಿಧನರಾದರು.
ಸುಮಾರು 30 ವರ್ಷಗಳಿಗೂ ಅಧಿಕ ಕಾಲ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದ ಅವರು ಮುಂಬೈಯಲ್ಲಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕೊಡುಗೈ ದಾನಿಯಾಗಿ ದ್ದರು. ಅವರು ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Next Story




