ಸುರತ್ಕಲ್: ಹೊಟ್ಟೆನೋವಿನಿಂದ ಬಾಲಕ ನಿಧನ

ಸುರತ್ಕಲ್: ಕಾಟಿಪಳ್ಳ ನಿವಾಸಿ ಎಸ್ ಡಿಪಿಐ ಮುಖಂಡ ಅಬೂಬಕರ್ ಕುಳಾಯಿ ಅವರ ಮಗ ನಿಹಾಲ್ (16) ಹೊಟ್ಟೆನೋವಿನಿಂದ ರವಿವಾರ ನಿಧನರಾದರು. ಇವರು ಕೃಷ್ಣಾಪುರದ ನೂರುಲ್ ಹುದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸೆಸೆಲ್ಸಿ ವ್ಯಾಸಾಂಗ ಮಾಡುತ್ತಿದ್ದರು.
ಇಂದು ಬೆಳಗ್ಗೆ ಏಕಾಏಕಿ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಅವರನ್ನು ಸುರತ್ಕಲ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ನಿಧನರಾದರು ಎಂದು ತಿಳಿದು ಬಂದಿದೆ.
ಧಫನ ಕಾರ್ಯವು ಮಧ್ಯಾಹ್ನ 2:30 ಸುಮಾರಿಗೆ ಕುಳಾಯಿ ಈದ್ಗಾ ಖಬರ್ತಾನದಲ್ಲಿ ನಡೆಯಿತು.
ಮೃತರು ತಂದೆ ಅಬೂಬಕರ್ ಕುಳಾಯಿ ತಾಯಿ ನಿಶಾ ಸಹೋದರ ಸುಹೈಲ್ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Next Story




