ಇಬ್ರಾಹೀಂ ಮುಸ್ಲಿಯಾರ್

ಸುಳ್ಯ, ಜು.20: ತಾಲೂಕಿನ ಕೊಲ್ಲಮೊಗರು ಗ್ರಾಮದ ಇಡ್ನೂರು ಎಂಬಲ್ಲಿನ ಬದ್ರಿಯಾ ಜುಮಾ ಮಸೀದಿಯ ಖತೀಬ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪಿ.ಎ. ಇಬ್ರಾಹೀಂ ಮುಸ್ಲಿಯಾರ್ (87) ರವಿವಾರ ರಾತ್ರಿ ನಿಧನರಾದರು.
ಪತ್ನಿ, ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.
ಪುತ್ತೂರು ತಾಲೂಕಿನ ಈಶ್ವರಮಂಗಿಲ ನಿವಾಸಿಯಾಗಿದ್ದ ಇಬ್ರಾಹೀಂ ಮುಸ್ಲಿಯಾರ್ ಅವರು ಭೂ ಮಾಲಕರಾಗಿದ್ದ ಇಸ್ಮಾಯಿಲಬ್ಬ ಪಾರೆ ಅವರು ದಾನ ಮಾಡಿದ್ದ ಇಡ್ನೂರಿನ ಬದ್ರಿಯಾ ಜುಮಾ ಮಸೀದಿಯಲ್ಲಿ ಸತತ 55 ವರ್ಷಗಳ ಕಾಲ ಖತೀಬ್ ಆಗಿ ಕಾರ್ಯನಿರ್ವಹಿಸಿದ್ದರು. ಒಂದೇ ಮಸೀದಿಯಲ್ಲಿ ಸೇವೆಗೈಯ್ಯುವ ಮೂಲಕ ಸ್ಥಳೀಯರ ಪ್ರೀತಿಗೆ ಪಾತ್ರರಾಗಿದ್ದರು.
ಪಾಳ್ಯತ್ತಡ್ಕ ಬದ್ರಿಯಾ ಜುಮಾ ಮಸೀದಿಯ ಆವರಣದಲ್ಲಿ ಸೋಮವಾರ ದಫನ ಕಾರ್ಯನಿರ್ವಹಿಸಿದ್ದರು.
*ಪಾರೆ ಕುಟುಂಬದ ಅಬೂಸಾಲಿ ಹಾಜಿ ಪಾರೆ, ಆಲಿಕುಂಞಿ ಪಾರೆ, ಇಬ್ರಾಹೀಂ ಪಾರೆ, ಹಮೀದ್ ಪಾರೆ, ಅಬ್ದುಲ್ಲಾ ಪಾರೆ, ಇಡ್ನೂರಿನ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್, ಉಪಾಧ್ಯಕ್ಷ ಅಬ್ದುಲ್ಲಾ ಕುಂಞಿ, ಕೋಶಾಧಿ ಕಾರಿ ಝಕರಿಯಾ ಕೊಲ್ಲಮೊಗರು, ಕಾರ್ಯದರ್ಶಿ ರಝಾಕ್, ಸದಸ್ಯರಾದ ಇಬ್ರಾಹೀಂ ಹರಿಹರ, ಕುಂಞಿಮೋನು ಸಂತಾಪ ಸೂಚಿಸಿದ್ದಾರೆ.




