ಮಂಗಳೂರು, ಜು.29: ಮಹೇಶ್ ಮೋಟರ್ಸ್‌ನ ಮಾಲಕ ಎ.ಕೆ ಜಯರಾಮ ಶೇಕ ಅವರ ಪುತ್ರ ಮಹೇಶ್ ಶೇಕ (49) ಅವರು ಅಲ್ಪಕಾಲದ ಅಸೌಖ್ಯದಿಂದ ಜು.29ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮಹೇಶ್ ಮೋಟರ್ಸ್ ನ ನಿರ್ದೇಶಕರಾಗಿದ್ದರು. ಬೆಂಗಳೂರಿನಲ್ಲಿ ವಾಸ್ತುತಜ್ಞರಾಗಿ ಗುರುತಿಸಿಕೊಂಡಿದ್ದರು.
ಮೃತರು ತಂದೆ, ತಾಯಿ, ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.