ಯೂಸುಫ್ ಬ್ಯಾರಿ

ಮಂಗಳೂರು: ಬಂಟ್ವಾಳ ಪುದುಗ್ರಾಮದ ಫರಂಗಿಪೇಟೆ ನಿವಾಸಿ ಯೂಸುಫ್ ಬ್ಯಾರಿ (64) ಅಲ್ಪ ಕಾಲದ ಅಸೌಖ್ಯ ದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು.
ಯೂಸುಫ್ ಬ್ಯಾರಿ ಅವರು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಸಹಾಯಕರಾಗಿ(ಆಡಳಿತ) 35 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಮೃತ ಯೂಸುಫ್ ಅವರು ಪತ್ನಿ ,ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ.
ಯೂಸುಫ್ ಅವರ ಮೃತದೇಹದ ದಫನ ಕಾರ್ಯ ನಾವುರ ಗ್ರಾಮದ ಅಗ್ರಹಾರ ಮುಹಿಯುದ್ದೀನ್ ಮಸೀದಿಯ ವಠಾರದಲ್ಲಿ ಗುರುವಾರ ಬೆಳಗ್ಗೆ 8 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲ ತಿಳಿಸಿದೆ.
Next Story




