ರಜನಿಕಾಂತ್ ತಂತ್ರಿ ಮಾರ್ಪಳ್ಳಿ

ಉಡುಪಿ, ಆ.31: ಉಡುಪಿಯ ಮಾರ್ಪಳ್ಳಿ ನಿವಾಸಿ ರಜನಿಕಾಂತ್ ತಂತ್ರಿ(45) ಅಸೌಖ್ಯದಿಂದ ರವಿವಾರ ರಾತ್ರಿ ನಿಧನರಾದರು. ಕುಕ್ಕಿಕಟ್ಟೆ ಶಾಲೆಯ ನಿವೃತ್ತ ಶಿಕ್ಷಕ ದಿ.ಶ್ರೀಪತಿ ತಂತ್ರಿ ಅವರ ಪುತ್ರರಾದ ರಜನಿಕಾಂತ್ ಕೆಲ ಸಮಯ ದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ರವಿವಾರ ಸಂಜೆ ಮನೆಯಲ್ಲಿ ತೀವ್ರ ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.
ಮೃತರು ಪತ್ನಿ, ತಾಯಿ ಸುಬೋಧಿನಿ ಶಾಲೆಯ ನಿವೃತ್ತ ಶಿಕ್ಷಕಿ ಪ್ರಫುಲ್ಲ, ಸಹೋದರ ಶಶಿಕಾಂತ್ ತಂತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ವೃತ್ತಿಯಲ್ಲಿ ಮೆಡಿಕಲ್ ಪ್ರತಿನಿಧಿಯಾಗಿದ್ದ ರಜನಿಕಾಂತ್, ಸಾಹಿತ್ಯಾಭಿ ಮಾನಿಯಾಗಿದ್ದು, ಅವರ ಹಲವು ಕವನಗಳು ಪ್ರಕಟಗೊಂಡಿದ್ದವು.
Next Story




