ಅಮ್ಮಣ್ಣಿ ಡಂಗು ಪಾಣಾರ

ಉಡುಪಿ, ಸೆ.2: ತುಳುನಾಡಿನ ದೈವಾರಾಧನೆ, ಜನಪದ ಕಲೆ, ಸಂಸ್ಕೃತಿಯ ಉಳಿವು ಮತ್ತು ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದ ಹಿರಿಯ ಕಲಾವಿದೆ, ದೈವಾರಾಧನೆಯ ನಿಷ್ಠಾವಂತ ಆರಾಧಕಿ, ದಿ. ಪಡ್ಡಮ ಡಂಗು ಪಾಣಾರ ಅವರ ಧರ್ಮಪತ್ನಿ ಅಮ್ಮಣ್ಣಿ ಡಂಗು ಪಾಣಾರ ಅವರು ಇಂದು ನಿಧನರಾದರು.
ಅಮ್ಮಣ್ಣಿ ಪಾಣಾರ ಅವರು ಅತ್ಯಂತ ನಿಷ್ಠೆಯಿಂದ ದೈವಾರಾಧನೆಯನ್ನು ಆರಾಧಿಸುವ ಮೂಲಕ ಜನರ ಪ್ರೀತಿಗೆ ಪಾತ್ರರಾಗಿದ್ದರು. ತುಳುನಾಡಿನ ಜನಪದ ಕಲೆ ಉಳಿಸಿಬೆಳೆಸುವಲ್ಲಿ, ಕೃಷಿ ಪಾಡ್ದನ, ದೈವದೇವರುಗಳ ಪಾಡ್ದನ ಹಾಗೂ ಮಾದಿರ ನಲಿಕೆಯಲ್ಲೂ ಇವರು ಖ್ಯಾತಿ ಪಡೆದಿದ್ದರು.
ಅಮ್ಮಣ್ಣಿ ಪಾಣಾದ ಮಕ್ಕಳಾದ ಖ್ಯಾತ ದೈವನರ್ತಕರಾದ ಪಡ್ಡಮ ಸಂಜೀವ ಪಾಣಾರ ಹಾಗೂ ಪಡ್ಡಮ ರವಿ ಪಾಣಾರ, ಖ್ಯಾತ ನಾಗಸ್ವರ ವಾದಕ ಪಡ್ಡಮ ಪಾಂಡುರಂಗ ಪಾಣಾರ ಅವರನ್ನು ಅಗಲಿದ್ದಾರೆ.
ತಮ್ಮ ಕಲಾ ಪರಂಪರೆಯನ್ನು ಮುಂದಿನ ಪೀಳಿಗೆಗೆ ಧಾರೆ ಎರೆಯುವ ಮೂಲಕ ತುಳುನಾಡಿನ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ಕಲಾ ಸೇವೆ ಹಾಗೂ ದೈವಾರಾಧನೆಯ ಕ್ಷೇತ್ರದಲ್ಲಿನ ಸಾಧನೆಗೆ ರಾಜ್ಯ ಹಾಗೂ ವಿವಿಧ ರಾಜ್ಯಗಳ ಪ್ರಶಸ್ತಿ, ಪುರಸ್ಕಾರಗಳು ಸಂದಿವೆ.




