ದೇವಕಿ ಟೀಚರ್

ಉಡುಪಿ, ಸೆ.8: ಪಿತ್ರೋಡಿಯ ಸದಿಯ ಸಾವುಕಾರ್ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಪ್ರೀತಿಯ ಟೀಚರ್ ಆಗಿದ್ದು, ಊರಿನವರ ಗೌರವಕ್ಕೆ ಪಾತ್ರರಾಗಿದ್ದ ಕುತ್ಪಾಡಿ ಕಾನಂಗಿ ದೇವಸ್ಥಾನ ಸಮೀಪದ ದೇವಿಕೃಪಾದ ನಿವಾಸಿ ಸಾಮಾಜಿಕ ಮುಂದಾಳಾಗಿದ್ದ ದಿ.ಅಂಗರ ತಿಂಗಳಾಯರ ಧರ್ಮಪತ್ನಿ ದೇವಕಿ ಟೀಚರ್ (83) ಇಂದು ಬೆಳಗ್ಗೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಮೃತರು ನಿಡಂಬೂರು ಯುವಕ ಮಂಡಲದ ನಿಕಟಪೂರ್ವ ಗೌರವಾಧ್ಯಕ್ಷ ದೀಪಕ್ ರಾಜ್, ಉದ್ಯಮಿ ದಿಲೀಪ್ ರಾಜ್ ಸೇರಿದಂತೆ ಓರ್ವ ಪುತ್ರಿ, ಬಂಧುಬಳಗ ಹಾಗೂ ಅಪಾರ ಶಿಷ್ಯ ವೃಂದವನ್ನು ಅಗಲಿದ್ದಾರೆ.
Next Story




