ಬಿ.ಕೆ.ಶಂಕರ ಭಟ್

ಮೂಡುಬಿದಿರೆ: ಕಲ್ಲಬೆಟ್ಟು ಗಂಟಾಲ್ಕಟ್ಟೆ ನಿವಾಸಿ, ಪುರೋಹಿತ, ಸಮಾಜ ಸೇವಕ ಬಿ.ಕೆ.ಶಂಕರ ಭಟ್ (72) ಶುಕ್ರವಾರ ನಿಧನ ಹೊಂದಿದರು.
ಮೂಲತಃ ಉಜಿರೆಯವರಾಗಿದ್ದ ಅವರು ಬೆಳ್ತಂಗಡಿ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಪ್ರಮುಖರಲ್ಲಿ ಓರ್ವರಾಗಿದ್ದು ಉಜಿರೆ, ಮೂಡುಬಿದಿರೆ, ಹೊಸಬೆಟ್ಟು ಮತ್ತಿತರ ಪರಿಸರದ ವಿವಿಧ ದೇವಸ್ಥಾನ, ಆರಾಧನ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದ್ದು ಸಾಮಾಜಿಕ ಸೇವಾ ಚಟುವಟಿಕೆಗಳಲ್ಲೂ ಗುರುತಿಸಿಕೊಂಡಿದ್ದರು.
ಉದ್ಯಮಿ ಕೆ. ಶ್ರೀಪತಿ ಭಟ್, ಮಾರೂರು ಖಂಡಿಗ ರಾಮದಾಸ ಆಸ್ರಣ್ಣ, ಪ್ರಸನ್ನ ಆಸ್ರಣ್ಣ ಸಹಿತ ಗಣ್ಯರು ಶಂಕರ ಭಟ್ಟರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
Next Story




