ಕಟ್ಕೆರೆ ನಾಗರಾಜ್ ನಾವುಡ

ಕುಂದಾಪುರ, ಅ.6: ತಾಲೂಕಿನ ಮೇಲ್ಕಟ್ಕೆರೆ ನಿವಾಸಿ ನಾಗರಾಜ ನಾವುಡ (45) ಸೋಮವಾರ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು.
ಪೌರೋಹಿತ್ಯ ವೃತ್ತಿಯನ್ನು ಮಾಡುತ್ತಾ, ಎಲ್ಲರ ವಿಶ್ವಾಸಕ್ಕೆ ಭಾಜನರಾಗಿದ್ದ ನಾವುಡರು ಯಕ್ಷಗಾನದ ಬಗ್ಗೆ ಅಪಾರವಾದ ಒಲವುಳ್ಳವರಾಗಿದ್ದರು. ತನ್ನ ಸಂಪಾದನೆಯ ಬಹುಭಾಗವನ್ನು ಕಲೆ, ಕಲಾವಿದರಿಗಾಗಿ ವಿನಿಯೋಗಿಸುತ್ತಾ ಬಂದಿದ್ದರು.
ನಾಗರಾಜ್ ನಾವುಡ ತಂದೆ, ತಾಯಿ, ಪತ್ನಿ, ಪುತ್ರಿ ಹಾಗೂ ದೊಡ್ಡ ಹಿತೈಷಿ ಬಳಗವನ್ನು ಅಗಲಿದ್ದಾರೆ. ಯಕ್ಷಗಾನ ಕಲಾರಂಗದ ಆಜೀವ ಸದಸ್ಯರಾಗಿದ್ದ ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Next Story




