ಎಂ.ಕೆ. ಅಬ್ಬಾಸ್ ಮದ್ಪಾಡಿ

ಮಂಜನಾಡಿ: ಮಂಜನಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಎಂ.ಕೆ. ಅಬ್ಬಾಸ್ ಮದ್ಪಾಡಿ (56) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾದರು.
ಮಂಜನಾಡಿ ಗ್ರಾಮ ಪಂಚಾಯತ್‌ನಲ್ಲಿ ಮೂರು ಬಾರಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಅವರು, ಕಾಂಗ್ರೆಸ್ ಮಂಜನಾಡಿ ಗ್ರಾಮ ಸಮಿತಿ ಉಪಾಧ್ಯಕ್ಷರಾಗಿ, ಉರುಮಣೆ ಮೊಯ್ಯದ್ದೀನ್ ಜುಮಾ ಮಸೀದಿ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದಾರೆ.
ಮೃತರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಸಚಿವ ಯು.ಟಿ ಖಾದರ್, ಡಿಸಿಸಿ ಉಪಾಧ್ಯಕ್ಷ ಟಿ ಎನ್ ಅಬ್ದುಲ್ಲಾ ಮಾಜಿ, ಜಿ.ಪಂ ಸದಸ್ಯ ಹಾಜಿ ಎನ್.ಎಸ್ ಕರೀಂ, ಹಮೀದ್ ಮದ್ಪಾಡಿ, ಮೋನು ಕಲ್ಕಟ್ಟ ಸಂತಾಪ ಸೂಚಿಸಿದಾರೆ.
Next Story




