ಬಂಟ್ವಾಳ : ಮಾಣಿ ಸಮೀಪದ ಬುಡೋಳಿ ನಿವಾಸಿ ಅಬೂಬಕ್ಕರ್ ಹಾಜಿ (75) ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಕೊಡಾಜೆಯ ಸುಲ್ತಾನ್ ಬೀಡಿ ಕಂಪೆನಿಯಲ್ಲಿ ಹಿರಿಯ ಸಿಬ್ಬಂದಿಯಾಗಿದ್ದ ಇವರು ದಾನಿಯಾಗಿ ಗುರುತಿಸಿ ಕೊಂಡಿದ್ದರು. ಇವರು ಪತ್ನಿ, ಇಬ್ಬರು ಪುತ್ರರ ಸಹಿತ ಅಪಾರ ಸಂಖ್ಯೆಯ ಬಂಧು ಬಳಗವನ್ನು ಅಗಲಿದ್ದಾರೆ.