ಎಂ. ರಾಮಚಂದ್ರ ರಾವ್

ಉಡುಪಿ, ಅ.23: ಕಡಿಯಾಳಿಯ ಯು.ಕಮಲಾಬಾಯಿ ಹೈಸ್ಕೂಲ್ನ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದ ಎಂ.ರಾಮಚಂದ್ರ ರಾವ್ (92) ಅವರು ಬುಧವಾರ ರಾತ್ರಿ ಮೂಡುತೋನ್ಸೆ ಗ್ರಾಮದ ಮೂಡುಕುದ್ರು ಸ್ವಗೃಹ ದಲ್ಲಿ ನಿಧನರಾದರು. ಮೃತರು ಪತ್ನಿ, ಮೂವರು ಪುತ್ರಿಯರು ಹಾಗೂ ಪುತ್ರನನ್ನು ಅಗಲಿದ್ದಾರೆ.
1963ರಿಂದ ಎಂಟು ವರ್ಷಗಳ ಕಾಲ ಕಡಿಯಾಳಿ ಕಮಲಾಬಾಯಿ ಹೈಸ್ಕೂಲ್ನಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಅವರು 1983ರಿಂದ 1991ರವರೆಗೆ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
Next Story




