ಅಹ್ಮದ್ ಹಾಜಿ ಡಿಲಕ್ಸ್

ಮಂಗಳೂರು: ಮೂಲತಃ ಕೇರಳದ ತಲಚೇರಿಯ, ಪ್ರಸಕ್ತ ನಗರದ ಜ್ಯೋತಿ ಸಮೀಪದ ನಿವಾಸಿ, ಹಂಪನಕಟ್ಟೆ ಹಳೆ ಬಸ್ ನಿಲ್ದಾಣದಲ್ಲಿ ಡಿಲಕ್ಸ್ ಹೊಟೇಲ್ ನಡೆಸುತ್ತಿದ್ದ ಕೆ.ಪಿ. ಅಹ್ಮದ್ ಹಾಜಿ ಡಿಲಕ್ಸ್ (84)ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು.
ಪತ್ನಿ, ಒಬ್ಬ ಪುತ್ರ ಹಾಗೂ ನಾಲ್ಕು ಮಂದಿ ಪುತ್ರಿಯರು ಮತ್ತು ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.
ಕೊಡುಗೈ ದಾನಿಯೂ ಆಗಿದ್ದ, ಸರಳ ಸಜ್ಜನಿಕೆಯ ವ್ಯಕ್ತಿತ್ವದ ಅವರು ಕೇರಳ ಮುಸ್ಲಿಂ ಜಮಾಅತಿನ ದೀರ್ಘ ಕಾಲ ಅಧ್ಯಕ್ಷರಾಗಿದ್ದರು. ಇತರ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.
ಶನಿವಾರ ಲುಹರ್ ನಮಾಝ್‌ಗೆ ಮುನ್ನ ಮಂಗಳೂರಿನ ಬಂದರ್ ಕೇಂದ್ರ ಜುಮಾ ಮಸೀದಿಯ ಆವರಣದಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ತಿಳಿದು ಬಂದಿದೆ.
Next Story





