ಆಳಂದ | ಫೀರಾಸತ್ ಅನ್ಸಾರಿ ನಿಧನ

ಕಲಬುರಗಿ : ಆಳಂದ ಪಟ್ಟಣದಲ್ಲಿನ ಸೂಫಿ-ಸಂತ ಹಜರತ್ ಲಾಡ್ಲೆ ಮಶಾಕ್ ದರ್ಗಾದ ಮಾನಕರಿ ಕುಟುಂಬದ ಅನ್ಸಾರಿ ಮೊಹಲ್ಲಾ ನಿವಾಸಿ ಫೀರಾಸತ್ ಮಹಿಬೂಬ ಅನ್ಸಾರಿ (49) ಅವರು ಬಧವಾರ ನಿಧನರಾಗಿದ್ದಾರೆ.
ಮೃತರಿಗೆ ಇಬ್ಬರು ಪುತ್ರಿಯರು, ತಾಯಿ ಮತ್ತು ಹಿರಿಯ ಸಹೋದರರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಬುಧವಾರ ದರ್ಗಾದ ದಪ್ಪನಭೂಮಿಯಲ್ಲಿ ನೆರವೇರಿಸಲಾಗಿದೆ.
ಗಣ್ಯರ ಶೋಕವ್ಯಕ್ತ :
ಮೃತರ ಅಗಲಿಕೆಗೆ ಆಳಂದ ಶಾಸಕ ಬಿ.ಆರ್.ಪಾಟೀಲ್, ಮಾಜಿ ಶಾಸಕ ಸುಭಾಷ ಗುತ್ತೇದಾರ, ಸಿಪಿಐ ರಾಜ್ಯ ಕಾರ್ಯಕಾರಿ ಮಂಡಳಿಯ ಸದಸ್ಯ ಮೌಲಾ ಮುಲ್ಲಾ, ಜಾಗತೀಕ ಲಿಂಗಾಯತ್ ಮಹಾಸಭಾ ತಾಲೂಕು ಅಧ್ಯಕ್ಷ ರಮೇಶ ಲೋಹಾರ, ಆಳಂದ ಪುರಸಭೆ ಅಧ್ಯಕ್ಷ ಫೀರದೋಸ್ ಅನ್ಸಾರಿ, ದರ್ಗಾ ಕಮೀಟಿಯ ಆಸೀಫ್ ಅನ್ಸಾರಿ, ಕಲೀಲ ಅನ್ಸಾರಿ ಹಾಗೂ ಹಿರಿಯ ಮುಖಂಡ ಕಾಲೇಮಿರ್ ಅನ್ಸಾರಿ, ದಲಿತ ಮುಖಂಡ ದಯಾನಂದ ಶೇರಿಕಾರ, ನ್ಯಾಯವಾದಿ ದಿಲೀಪ ಕ್ಷೀರಸಾಗರ ಸೇರಿದಂತೆ ಸ್ಥಳೀಯ ಪತ್ರಕರ್ತರ ಸಂಘವು ಶೋಕವ್ಯಕ್ತಪಡಿಸಿದೆ.
Next Story





