ಅನಂತಪದ್ಮನಾಭ ಭಟ್

ಉಡುಪಿ, ನ.28: ಬಾರ್ಕೂರಿನ ಧರ್ಮಶಾಲೆ ಶ್ರೀಮಾಸ್ತಿ ಅಮ್ಮನವರ ದೇವಳದ ಮುಕ್ತೇಸರ ಹಾಗೂ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅನಂತಪದ್ಮನಾಭ ಭಟ್ (51) ಗುರುವಾರ ನಿಧನಹೊಂದಿದರು.
ತನ್ನ ಉದ್ಯೋಗ ತೊರೆದು ಅರ್ಚಕರಾಗಿದ್ದ ಇವರು ಮಾಸ್ತಿಯಮ್ಮ ದೇವಳದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದ್ದರು. ಅವಿವಾಹಿತರಾಗಿದ್ದ ಇವರು ದೇವಳದಲ್ಲಿ ಮಕ್ಕಳಿಗೆ ಯಕ್ಷಗಾನ ತರಗತಿ ನಡೆಸುತ್ತಾ ಪ್ರದರ್ಶನ ಗಳನ್ನು ಆಯೋಜಿಸುತ್ತಿದ್ದರು.
Next Story





