ಬಪ್ಪಳಿಗೆ ಅಬ್ದುಲ್ ರಹ್ಮಾನ್ ಹಾಜಿ ನಿಧನ

ಪುತ್ತೂರು: ನಗರದ ಬಪ್ಪಳಿಗೆ ಮಸ್ಜಿದುನೂರ್ ಮೊಹಲ್ಲಾದ ನಿವಾಸಿ, ಬ್ರಾಂಡೆಡ್ ವಾಚ್ ವ್ಯಾಪಾರಸ್ಥ ಪಿ.ಬಿ. ಅಬ್ದುಲ್ ರಹಿಮಾನ್ ಹಾಜಿ (ಅದ್ರಾಮ ಹಾಜಿ)(65) ರವರು ಹೃದಯಾಘಾತದಿಂದ ಬುಧವಾರ ತಡರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮಯ್ಯತ್ ಸಂಧರ್ಶನಕ್ಕಾಗಿ ಕೂರ್ನಡ್ಕ ಫೀರ್ ಮೊಹಲ್ಲಾ ಜುಮಾ ಮಸೀದಿಯ ಬಳಿಯಲ್ಲಿರುವ ಅವರ ಹಿರಿಯ ಸಹೋದರ ಹಾಜಿ ಮುಹಮ್ಮದ್ ಸಾಬ್ ರವರ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಂದರ್ಶನದ ಬಳಿಕ ಬಪ್ಪಳಿಗೆ ಮಸ್ಟಿದುನೂರ್ ಜುಮಾ ಮಸೀದಿಯಲ್ಲಿ ಮಯ್ಯತ್ ನಮಾಝ್ ನೆರವೇರಿಸಿ ದಫನ ಕಾರ್ಯ ನಡೆಯಲಿದೆ.
ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.
Next Story





