ಶತಾಯುಷಿ ಪುಟ್ಟಮ್ಮ ಬೊಳ್ಳೂರು

ಸುಳ್ಯ, ಡಿ.4: ನಾಟಿವೈದ್ಯರಾಗಿ ಜನಮನ್ನಣೆಗಳಿಸಿದ್ದ ಶತಾಯುಷಿ, ತೊಡಿಕಾನ ಗ್ರಾಮದ ಗುಂಡಿಗದ್ದೆ ನಿವಾಸಿ ದಿ.ಬೊಳ್ಳೂರು ನಾಗಪ್ಪಗೌಡರ ಪತ್ನಿ ಪುಟ್ಟಮ್ಮ ಬೊಳ್ಳೂರು (101) ನಿಧನರಾದರು.
ತೊಡಿಕಾನ ಗ್ರಾಮದ ಸುತ್ತಮುತ್ತ ಮನೆ ಮನೆಗೆ ತೆರಳಿ ನೂರಾರು ಮಂದಿಗೆ ಹೆರಿಗೆ ಮಾಡಿಸಿ, ತಾಯಿ, ಮಗುವಿಗೆ ನಾಟಿ ಔಷಧಿ ನೀಡುತ್ತಿದ್ದರು. ಹಲವು ಬಗೆಯ ರೋಗಗಳಿಗೆ ಹಳ್ಳಿಮದ್ದು ನೀಡಿ ಗ್ರಾಮದಲ್ಲಿ ಜನಪ್ರಿಯರಾಗಿದ್ದರು.
ಮೃತರು ನಾಲ್ವರು ಪುತ್ರರು, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.
Next Story





