ಉಪ್ಪಿನಂಗಡಿ: ಯು.ಕೆ. ಇಲ್ಯಾಸ್ ನಿಧನ

ಉಪ್ಪಿನಂಗಡಿ: ಇಲ್ಲಿನ ಪಂಜಾಳ ನಿವಾಸಿ, ಮಟನ್ ವ್ಯಾಪಾರಿ ಯು.ಕೆ. ಇಲ್ಯಾಸ್ (67) ಹೃದಯಾಘಾತದಿಂದ ಜು. 10ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕಳೆದ ಸುಮಾರು 40 ವರ್ಷಗಳಿಂದ ಉಪ್ಪಿನಂಗಡಿ ಹಳೆ ಬಸ್ ನಿಲ್ದಾಣದ ಬಳಿಯಲ್ಲಿ ಸಫಾ ಮಟನ್ ಸ್ಟಾಲ್ ಹೊಂದಿದ್ದರು. ಜಮಾಅತೇ ಇಸ್ಲಾಂ ಹಿಂದ್ ಇದರ ಹಿರಿಯ ನಾಯಕರಾಗಿರುವ ಇವರು ಆತೂರು ಆಯಿಷಾ ಎಜ್ಯುಕೇಶನಲ್ ಟ್ರಸ್ಟ್ ನ ಸ್ಥಾಪಕ ಸದಸ್ಯರಾಗಿದ್ದರು.
ನೆಕ್ಕಿಲಾಡಿ ಮಸ್ಜಿದುಲ್ ಹುದಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಇವರು ಪ್ರಸಕ್ತ ಸಾಲಿನ ಗೌರವಾಧ್ಯಕ್ಷರಾಗಿದ್ದರು.
ಮೃತರು ಪತ್ನಿ, 4 ಗಂಡು, 1 ಹೆಣ್ಣು ಮಗಳ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.
Next Story





