ಕಾರ್ಕಳ : ಆಸಿಯಾ ಎಂ. ಯೂಸುಫ್ ನಿಧನ
ಮಂಗಳೂರು : ಹೆಸರಾಂತ ಬಿಲ್ಡರ್, ಇನ್ - ಲ್ಯಾಂಡ್ ಬಿಲ್ಡರ್ಸ್ ನ ಅಧ್ಯಕ್ಷ ಹಾಗು ಆಡಳಿತ ನಿರ್ದೇಶಕ ಸಿರಾಜ್ ಅಹಮದ್ ಅವರ ತಾಯಿ ಆಸಿಯಾ ಎಂ.ಯೂಸುಫ್ ಅವರು ಅಲ್ಪಕಾಲದ ಅಸೌಖ್ಯದ ಬಳಿಕ ಗುರುವಾರ ಮಧ್ಯಾಹ್ನ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.
ಇವರು ದಿವಂಗತ ಗಂಜಿಮಠ ಮುಹಮ್ಮದ್ ಯೂಸುಫ್ ಅವರ ಪತ್ನಿ.
ಮೃತರು ಆರು ಮಂದಿ ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಶುಕ್ರವಾರ ಜುಮಾ ನಮಾಝ್ ನ ಬಳಿಕ ಕಾರ್ಕಳದಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಆಸಿಯಾ ಎಂ. ಯೂಸುಫ್ ಅವರ ನಿಧನಕ್ಕೆ ಸ್ಪೀಕರ್ ಯು.ಟಿ.ಖಾದರ್, ರಾಜ್ಯ ಅಲೈಡ್ ಮತ್ತು ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್, ಮಾಧ್ಯಮ ಕಮ್ಯುನಿಕೇಷನ್ಸ್ ನ ಅಧ್ಯಕ್ಷ ಎಚ್ ಎಂ ಅಫ್ರೋಜ್ಹ್ ಅಸಾದಿ, ಖ್ಯಾತ ವೈದ್ಯ ಡಾ.ಮೊಹಮ್ಮದ್ ಇಸ್ಮಾಯಿಲ್ ಎಚ್. ಮತ್ತಿತರರು ಸಂತಾಪ ಸೂಚಿಸಿದ್ದಾರೆ.
Next Story





