ಕಾಟಿಪಳ್ಳ: ಉದ್ಯಮಿ ಪಿ.ಕೆ.ನಿಸಾರ್ ಅಹಮದ್ ನಿಧನ

ಸುರತ್ಕಲ್: ಕಾಟಿಪಳ್ಳ 2ನೇ ಬ್ಲಾಕ್ ನಿವಾಸಿ ಉದ್ಯಮಿ ಪಿ.ಕೆ.ನಿಸಾರ್ ಅಹ್ಮದ್ (58) ಅವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಬೆಳಗ್ಗಿನ ಜಾವ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕಿಡ್ನಿ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗ್ಗಿನ ಜಾವ ಅನಾರೋಗ್ಯ ಉಲ್ಬಣಗೊಂಡು ಮೃತಪಟ್ಟರು ಎಂದು ತಿಳಿದು ಬಂದಿದೆ.
ಕಾಟಿಪಳ್ಳದ 2ನೇ ಬ್ಲಾಕ್ ನ ಪಣಂಬೂರು ಮುಸ್ಲಿಂ ಜಮಾಅತ್ ನ ಜುಮಾ ಮಸೀದಿಯ ಖಬರಸ್ತಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತರು ಪತ್ನಿ, ಪುತ್ರಿ ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.
Next Story





