ಕಾಪು : ಕೆ. ಎಮ್. ಲತ್ಫುಲ್ಲಾ ನಿಧನ

ಕಾಪು : ಜಾಫರ್ ಟವರ್ ನ ಮಾಲಕ ಕೆ. ಎಮ್. ಲತ್ಫುಲ್ಲಾ ರವರು, (72 ) ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಸಿವಿಲ್ ಕಂಟ್ರಾಕ್ಟರ್ ಆಗಿದ್ದ ಇವರು ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದರು. ಉಡುಪಿ ಜಿಲ್ಲಾ ವಖ್ಫ್ ಸಲಹಾ ಸಮಿತಿಯ ಮಾಜಿ ಚೇರ್‌ಮ್ಯಾನ್, ಲಯನ್ಸ್ ಕ್ಲಬ್ ನ ಎಮ್‌ಜೆಎಫ್, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
Next Story





