ನವೀನ್‌ಚಂದ್ರ ಶ್ರೀಯಾನ್

ಮಂಗಳೂರು : ನಗರದ ಕೊಟ್ಟಾರ ಶ್ರೀ ವಿದ್ಯಾ ಸರಸ್ವತಿ ಕ್ಷೇತ್ರದ ಆಡಳಿತ ಮೊಕ್ತೇಸರರಾದ ನವೀನಚಂದ್ರ ಶ್ರೀಯಾನ್ (69) ಅವರು ಅಲ್ಪಕಾಲದ ಅಸೌಖ್ಯದ ಕಾರಣ ಶುಕ್ರವಾರ(ಅ.9) ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಶ್ರೀಯಾನ್ ಅವರು ಈ ಹಿಂದೆ ಉರ್ವ ಮಾರಿಯಮ್ಮ ದೇವಸ್ಥಾನದ ಮೊಕ್ತೇಸರರಾಗಿ ಕೂಡ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಪುತ್ರಿ ಮತ್ತು ಪುತ್ರನನ್ನು ಅಗಲಿದ್ದಾರೆ.
ನವೀನ್‌ಚಂದ್ರ ಶ್ರೀಯಾನ್ ಅವರ ನಿಧನಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್ ಸೇರಿದಂತೆ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
Next Story




