ವಾಸುದೇವ ಬೋಳೂರು
ಮಂಗಳೂರು, ಸೆ.27: ಮೀನುಗಾರರ ಸಂಘಟನೆಯ ರಾಷ್ಟ್ರೀಯ ಮುಖಂಡ, ಜನಪರ ಸಂಘಟಕ, ನಗರದ ಬೋಳೂರು ನಿವಾಸಿ ವಾಸುದೇವ ಬೋಳೂರು (86) ಮಂಗಳವಾರ ನಿಧನರಾದರು.
ಕರ್ನಾಟಕ ವಿದ್ಯುತ್ ಮಂಡಳಿಯಲ್ಲಿ ಉದ್ಯೋಗಿಯಾಗಿದ್ದ ಅವರು ನಿವೃತ್ತಿಯ ಬಳಿಕ ಜನಪರ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮೀನುಗಾರರ ಸಂಘಟನೆಯ ಪ್ರಮುಖ ರಾಷ್ಟ್ರೀಯ ಮುಖಂಡರಲ್ಲಿ ಒಬ್ಬರಾಗಿದ್ದ ಅವರು ಅಹಿಂದ ಸಂಘಟನೆಯ ದ.ಕ.ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಖಿಲ ಭಾರತ ಮೀನುಗಾರರ ಸಂಘಟನೆಯ ಉಪಾಧ್ಯಕ್ಷರಾಗಿ, ಹಿಂದುಳಿದ ಜಾತಿಗಳ ಒಕ್ಕೂಟದ ಉಪಾಧ್ಯಕ್ಷರಾಗಿದ್ದ ಅವರು ಅನೇಕ ಜನಪರ ಚಳುವಳಿಗಳಲ್ಲಿ ಕೂಡ ಭಾಗಿಯಾಗಿದ್ದರು.
ಅವರ ಪತ್ನಿ ಈ ಹಿಂದೆಯೇ ನಿಧನರಾಗಿದ್ದರು. ಅಪಾರ ಬಂಧುಬಳಗವನ್ನು ಅಗಲಿದ್ದ ಅವರ ಅಂತ್ಯಕ್ರಿಯೆಯು ಬೋಳೂರು ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
Next Story