ನಝೀರ್
ಉಪ್ಪಿನಂಗಡಿ, ಜು.8: ಮಠ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಇದಿನಬ್ಬ ಹಾಜಿ ಮಠ ಅವರ ಪುತ್ರ ನಝೀರ್(54) ಹೃದಯಾಘಾತದಿಂದ ರವಿವಾರ ರಾತ್ರಿ ತುಂಬೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೂಲತಃ ಮಠ ನಿವಾಸಿಯಾಗಿರುವ ನಝೀರ್ ಅವರು ಪ್ರಸಕ್ತ ಬಿ.ಸಿ.ರೋಡ್ ನಲ್ಲಿ ವಾಸ್ತವ್ಯವಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಉಪ್ಪಿನಂಗಡಿ ಮಠ ಮಸೀದಿಯ ವಠಾರದಲ್ಲಿ ದಫನ ಕಾರ್ಯ ನಡೆಯಿತು.
Next Story