ಮಾಸ್ಟರ್ ಮುಹಮ್ಮದ್ ಗೌಸ್
ಕುಂದಾಪುರ, ಜು.9: ಹಂಗಳೂರು ನಿವಾಸಿ ಮಾಸ್ಟರ್ ಮುಹಮ್ಮದ್ ಗೌಸ್(79) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.
ಶಿಕ್ಷಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಅವರು ತದ ನಂತರ ಗಲ್ಫ್ ರಾಷ್ಟ್ರದಲ್ಲಿ ಹಲವು ವರ್ಷಗಳ ಕಾಲ ದುಡಿದಿ ದ್ದರು. ಜಮಾತಿನ ಹಿರಿಯರಾಗಿ, ಕುಂದಾಪುರ ಜಾಮಿಯ ಮಸೀದಿ, ಅಂಜುಮನ್ ಇಸ್ಲಾಹುಲ್ ಮುಸ್ಲಿಮೀನ್ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿ ಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
Next Story