ರಾಮಚಂದ್ರ ಐತಾಳ್

ಉಡುಪಿ: ಪೆರ್ಡೂರು ಪ್ರೌಢಶಾಲೆ ಮುಖ್ಯೋಪಾಧ್ಯಾಯರಾಗಿದ್ದ ಪಿ.ರಾಮಚಂದ್ರ ಐತಾಳ (84) ಇಂದು ನಿಧನ ಹೊಂದಿದರು. ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಯಕ್ಷಗಾನ ಮತ್ತು ಎಲ್ಲಾ ಕಲಾಪ್ರಕಾರವನ್ನು ಪ್ರೀತಿಸುತ್ತಿದ್ದ ಅವರು ಇಳಿ ವಯಸ್ಸಿನಲ್ಲೂ ಸಾಹಿತ್ಯ- ಕಲಾ ಕಾರ್ಯಕ್ರಮಗಳಲ್ಲಿ ಪೂರ್ತಿ ಹಾಜರಿದ್ದು ವೀಕ್ಷಿಸುತಿದ್ದರು.ಉಡುಪಿಯ ಹಲವು ಸಂಘಟನೆಗಳಲ್ಲಿ ಸದಸ್ಯರಾಗಿದ್ದ ಅವರು ಎಲ್ಲರ ಪ್ರೀತಿ, ವಿಶ್ವಾಸಕ್ಕೆ ಭಾಜನರಾಗಿದ್ದರು. ಯಕ್ಷಗಾನ ಕಲಾರಂಗದ ಆಜೀವ ಸದಸ್ಯರೂ ಆಗಿದ್ದ ಐತಾಳರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ವ್ಯಕ್ತ ಪಡಿಸಿದ್ದಾರೆ.
Next Story





