ಜಾನ್ ಬ್ಯಾಪ್ಟಿಸ್ಟ್ ಕರ್ನೆಲಿಯೋ

ಉಡುಪಿ, ಫೆ.19: ಉದ್ಯಮಿ, ಕೊಡುಗೈ ದಾನಿ, ಕಕ್ಕುಂಜೆ ನಿವಾಸಿ ಜಾನ್ ಬ್ಯಾಪ್ಟಿಸ್ಟ್(ರೋಬರ್ಟ್) ಕರ್ನೆಲಿಯೋ ಮಂಗಳವಾರ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಸಮಾಜದ ನೊಂದವರಿಗೆ ಅಶಕ್ತರಿಗೆ ಸಹಾಯ ಹಸ್ತವನ್ನು ಚಾಚುತ್ತಿದ್ದ ಇವರು, ಉಡುಪಿ ಧರ್ಮಪ್ರಾಂತ್ಯದ ವಿವಿಧ ಯೋಜನೆಗಳಿಗೆ ವಿಶೇಷ ಸಹಕಾರವನ್ನು ನೀಡಿದ್ದರು. ಕಕ್ಕುಂಜೆಯಲ್ಲಿ ನಿರ್ಮಾಣಗೊಂಡಿರುವ ಅನುಗ್ರಹ ಪಾಲನಾ ಕೇಂದ್ರಕ್ಕೆ ಭೂಮಿಯನ್ನು ದಾನ ಮಾಡಿದ್ದರು.
ಮೃತರ ನಿಧನಕ್ಕೆ ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ, ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಲಪತಿ ವಂ.ಡಾ.ರೋಶನ್ ಡಿಸೋಜ, ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ ಸಂತಾಪ ಸೂಚಿಸಿದ್ದಾರೆ.
ಮೃತರ ಅಂತ್ಯಕ್ರಿಯೆ ಫೆ.23ರಂದು ಸಂಜೆ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ಜರಗಲಿದೆ.
Next Story





