ಮುರಳೀಧರ ಬಲ್ಲಾಳ್

ಉಡುಪಿ, ಫೆ.20: ನಗರದ ಖಾಸಗಿ ಫೈನಾನ್ಸ್ ಒಂದರ ಮಾಲಕರು ಇಂದು ಅಪರಾಹ್ನದ ವೇಳೆಗೆ ಮನೆಯಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಕಿನ್ನಿಮೂಲ್ಕಿ ಕನ್ನರ್ಪಾಡಿ ನಿವಾಸಿ ಮುರಳೀಧರ ಬಲ್ಲಾಳ್ (56) ಮೃತಪಟ್ಟ ಉದ್ಯಮಿ.
ನಗರದ ಬಲ್ಲಾಳ್ ಫೈನಾನ್ಸ್‌ನ ಮಾಲಕರಾದ ಮುರಳೀಧರ್ ಅವರು ಅಪರಾಹ್ನದ ವೇಳೆ ಒಮ್ಮೆಗೆ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದು, ತಕ್ಷಣ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ಅದಾಗಲೇ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಮುರಳೀಧರ ಬಲ್ಲಾಳ್ ಪತ್ನಿ, ಪುತ್ರ ಹಾಗೂ ಪುತ್ರಿಯರನ್ನು ಅಗಲಿದ್ದಾರೆ. ಅವರು ಕನ್ನರ್ಪಾಡಿ ಜಯದುರ್ಗ ಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಉಡುಪಿ ಚೇಂಬರ್ ಆಪ್ ಕಾಮರ್ಸ್ ಸೇರಿ ಹಲವು ಸಂಘಸಂಸ್ಥೆಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸುತಿದ್ದರು.
Next Story





