ಹಾಜಿ ಸಿ.ಕೆ. ಅಹ್ಮದ್

ಮಂಗಳೂರು: ನಗರದ ಜೆಪ್ಪು ನಿವಾಸಿ ಹಾಜಿ ಸಿ.ಕೆ. ಅಹ್ಮದ್ (78) ರವಿವಾರ ನಿಧನರಾದರು.
ಒಬ್ಬ ಪುತ್ರ ಮತ್ತು ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.
ದ.ಕ ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದ ಹಾಜಿ ಅಹ್ಮದ್, ಹಯಾತುಲ್ ಇಸ್ಲಾಂ ಅಸೋಸಿಯೇಶನ್ನ ಸ್ಥಾಪಕ ಅಧ್ಯಕ್ಷರಾಗಿ, ಅಲ್ ಅಝ್ಹರಿಯಾ ಮದ್ರಸದ ಉಪಾಧ್ಯಕ್ಷರಾಗಿದ್ದರು.
*ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್, ಉಪಾಧ್ಯಕ್ಷರಾದ ಹಾಜಿ ಸಿ. ಮಹಮೂದ್, ಹಾಜಿ ಇಬ್ರಾಹಿಂ ಕೋಡಿಜಾಲ್, ಕೆ. ಅಶ್ರಫ್, ಹಾಜಿ ಇಮ್ತಿಯಾಝ್ ಅಹ್ಮದ್ ಕಾರ್ಕಳ, ಹಾಜಿ ಬಾಷಾ ಸಾಹೇಬ್ ಕುಂದಾಪುರ, ಹಾಜಿ ಎಸ್.ಎಂ. ರಶೀದ್, ಹಾಜಿ ಕೆ.ಪಿ. ಅಹ್ಮದ್ ಪುತ್ತೂರು, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್, ಖಜಾಂಚಿ ಹಾಜಿ ಮೂಸಾ ಮೊಯಿದಿನ್, ಕಾರ್ಯದರ್ಶಿಗಳಾದ ಹಾಜಿ ಅಹ್ಮದ್ ಬಾವ ಪಡೀಲ್, ಸಿ.ಎಂ. ಹನೀಫ್, ಅಹ್ಮದ್ ಬಾವ ಬಜಾಲ್, ಹಾಜಿ ರಿಯಾಝುದ್ದೀನ್, ಡಿ.ಎಂ. ಅಸ್ಲಂ, ಎಂ.ಎ. ಅಶ್ರಫ್, ಹಾಜಿ ಮೊಯಿದಿನ್ ಮೋನು, ಹಾಜಿ ಪಿ.ಪಿ. ಮಜೀದ್, ಯು.ಬಿ.ಸಲಿಂ, ಡಾ. ಆರೀಫ್ ಮಸೂದ್, ಹಾಜಿ ಬಿ.ಎಸ್. ಹುಸೈನ್ ಜೋಕಟ್ಟೆ, ಅಬೀದ್ ಜಲಿಹಾಲ್, ಹಾಜಿ ಮಕ್ಬೂಲ್ ಅಹ್ಮದ್, ಹಾಜಿ ಎಸ್.ಎ ಖಲೀಲ್ ಅಹ್ಮದ್ ಮತ್ತು ಸದಸ್ಯರು ಸಂತಾಪ ಸೂಚಿಸಿದ್ದಾರೆ.