ಶರ್ಫುದ್ದಿನ್ ಅಸಾದಿ

ಉಡುಪಿ, ಎ.21: ಹಳೆಯ ಪ್ರಜಾ ಸೋಶಿಯಲಿಸ್ಟ್ ಪಾರ್ಟಿಯ ಉಡುಪಿ ಜಿಲ್ಲಾ ಸದಸ್ಯರಾಗಿದ್ದ ಟಿ.ಶರ್ಫುದ್ದಿನ್ ಅಸಾದಿ(93) ಇಂದು ಬೆಳಗ್ಗೆ ಉಡುಪಿಯ ಗೋಲ್ಡನ್ ಪ್ಲಾಜಾದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು.
ಇವರು ಉಡುಪಿಯ ಹಾಶಿಮಿ ಮಸೀದಿಯ ಮಾಜಿ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ಮೃತರು ಪತ್ನಿ, ಮೂವರು ಪುತ್ರರು ಹಾಗೂ ನಾಲ್ವರು ಪುತ್ರಿಯನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಹಾಶಿಮಿ ಮಸೀದಿಯ ಆಡಳಿತ ಸಮಿತಿ ಸಂತಾಪ ವ್ಯಕ್ತಪಡಿಸಿದೆ.
Next Story