ಸಯ್ಯಿದ್ ಹಸನ್ ಜಿಫ್ರಿ ಚೆರುಕುಂಞಿಕೋಯ ತಂಙಳ್

ತಿರೂರಂಙಾಡಿ, ಎ.23: ಮೂನಿಯೂರು ಪರಕ್ಕಾವು ಕೊಡಿಂಞಿ ಪಳ್ಳಿಕ್ಕಳ್ ಸಯ್ಯಿದ್ ಹಸನ್ ಜಿಫ್ರಿ ಚೆರುಕುಂಞಿಕೋಯ ತಂಙಳ್ (ಕೆ.ಪಿ.ಸಿ ತಂಳ್ 68) ಎ.21ರಂದು ನಿಧನರಾಗಿದ್ದಾರೆ.
ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾದ ಅಧ್ಯಕ್ಷ ಸಯ್ಯಿದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಙಳ್ ರ ಸಹೋದರ ಸಂಬಂಧಿಯಾಗಿರುವ ಕೆಪಿಸಿ ತಂಳ್ ವಿವಿಧೆಡೆ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದರು.
ಮೃತರು ಪತ್ನಿ ಪಣಯತ್ತಿಲ್ ಸಫಿಯ್ಯ ಬೀವಿ, ಮಕ್ಕಳಾದ ಬೆಳ್ತಂಗಡಿಯ ದಾರುಸ್ಸಲಾಂನ ಅಧ್ಯಕ್ಷ ರಾಗಿರುವ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ದಾರಿಮಿ, ಸಯ್ಯಿದ್ ಜಿಫ್ರಿ ಕುಂಞಿ ಸೀದಿಕೋಯ ತಂಙಳ್ ಯಮಾನಿ, ಸಯ್ಯಿದ್ ತ್ವಾಹ ಜಿಫ್ರಿ ತಂಙಳ್ ಬಾಖವಿ, ಸಯ್ಯಿದ್ ಝಾಹಿರ್ ಜಿಫ್ರಿ ತಂಙಳ್ ಬಾಖವಿ, ಸಯ್ಯಿದತ್ ಸುಹೈರಾ ಬೀವಿ, ಸಯ್ಯಿದತ್ ಸುಮಯ್ಯಾ ಬೀವಿ, ಸಯ್ಯಿದತ್ ಸುಹೈಲಾ ಬೀವಿ ಮತ್ತಿತರನ್ನು ಅಗಲಿದ್ದಾರೆ.
ಮೃತರ ಮಗ್ಫಿರತ್‌ಗಾಗಿ ಪ್ರತ್ಯೇಕ ಪ್ರಾರ್ಥನೆ ನಡೆಸುವಂತೆ ದಾರುಸ್ಸಲಾಂ ಬೆಳ್ತಂಗಡಿ ಆಡಳಿತ ಸಮಿತಿಯು ಮನವಿ ಮಾಡಿದೆ.
Next Story





