ಪ್ರೊ.ಶ್ರೀನಿವಾಸ ಉಪಾಧ್ಯಾಯ

ಉಡುಪಿ: ಉಡುಪಿ ಎಂಜಿಎಂ ಕಾಲೇಜಿನ ವಾಣಿಜ್ಯ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ.ಕುಂಜಿತಾಯ ಶ್ರೀನಿವಾಸ ಉಪಾಧ್ಯ(78) ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಗ್ಗೆ ನಿಧನರಾದರು.
ಉಡುಪಿ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನ ಹಾಗೂ ಉಡುಪಿ ಅನಂತೇಶ್ವರ ದೇವಸ್ಥಾನದ ಪವಿತ್ರಪಾಣಿಯಾಗಿದ್ದ ಇವರು ಕಡಿಯಾಳಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಕಡಿಯಾಳಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷರಾಗಿ, ಉಡುಪಿ ಸಾರ್ವಜನಿಕ ಗಣೇಶೋಷ್ಠವ ಸಮಿತಿ ಕಡಿಯಾಳಿ ಇದರ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಪ್ರಸ್ತುತ ಕಡಿಯಾಳಿ ಬ್ರಾಹ್ಮಣ ವಲಯದ ಅಧ್ಯಕ್ಷರಾಗಿರುವ ಇವರು, ಪತ್ನಿ ಮತ್ತು ಅಪಾರ ಬಂಧುಮಿತ್ರರು ಹಾಗೂ ಶಿಷ್ಯವೃಂದವನ್ನು ಅಗಲಿದ್ದಾರೆ.
Next Story