ಅಬ್ದುಲ್ ಸತ್ತಾರ್

ಉಳ್ಳಾಲ: ಉಳ್ಳಾಲ ಕೋಡಿ ನಿವಾಸಿ ಅಬ್ದುಲ್ ಸತ್ತಾರ್ (55) ಹೃದಯಾಘಾತಕ್ಕೊಳಗಾಗಿ ಇಂದು ಬೆಳಗ್ಗೆ ನಿಧನರಾದರು.
ಮೃತರು ಪತ್ನಿ, ಐವರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧು -ಬಳಗವನ್ನು ಅಗಲಿದ್ದಾರೆ.
ಉಳ್ಳಾಲ ದರ್ಗಾ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿಯವರ ಸಹೋದರರಾಗಿರುವ ಅಬ್ದುಲ್ ಸತ್ತಾರ್ ನಿಧನಕ್ಕೆ ಕಾಂಗ್ರೆಸ್ ರಾಜ್ಯ ಸಂಯೋಜಕ ಫಾರೂಕ್ ಉಳ್ಳಾಲ್, ಉದ್ಯಮಿಗಳಾದ ಮುಹಮ್ಮದ್ ತ್ವಾಹ ಹಾಜಿ, ಯು.ಕೆ.ಇಲ್ಯಾಸ್, ಕಬೀರ್ ಚಾಯಬ್ಬ ಮುಹಿಯುದ್ದೀನ್ ಹಾಜಿ ಪೇಟೆ ಸಂತಾಪ ಸೂಚಿಸಿದ್ದಾರೆ.
Next Story