ಗಣೇಶ್ ಪೈ

ಉಡುಪಿ, ಜೂ.26: ತೆಂಕಪೇಟೆಯ ಜ್ಯೋತಿ ವೈಂಡಿಂಗ್ ಅಂಗಡಿಯ ಮಾಲಕ ಗಣೇಶ್ ಪೈ(42) ಅಲ್ಪಕಾಲದ ಅಸೌಖ್ಯದಿಂದ ಕಳೆದ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಬೀಡಿನಗುಡ್ಡೆಯ ಪಿಲಿಚಂಡಿ ಮಾರ್ಗದ ನಿವಾಸಿ ಗಣೇಶ್ ಪೈ ಕಳೆದ ಕೆಲವು ದಿನಗಳ ಹಿಂದೆ ಅನಾ ರೋಗ್ಯಕ್ಕೆ ತುತ್ತಾಗಿದ್ದು, ಚಿಕಿತ್ಸೆಗೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದುಬಂದಿದೆ. ಮೃತರು ಪತ್ನಿ, ಓರ್ವ ಪುತ್ರಿ, ತಾಯಿ, ಸಹೋದರಿ ಹಾಗೂ ಸಹೋದರರನ್ನು ಅಗಲಿದ್ದಾರೆ.
Next Story