ಜೆಡಿಎಸ್ ಮುಖಂಡ ಎಚ್.ಟಿ.ರಾಜೇಂದ್ರ ನಿಧನ

ಎಚ್.ಟಿ.ರಾಜೇಂದ್ರ (70)
ಚಿಕ್ಕಮಗಳೂರು : ಜೆಡಿಎಸ್ ಮುಖಂಡ, ಜನಪರ ನಾಯಕ ಎಚ್.ಟಿ.ರಾಜೇಂದ್ರ (70) ಅವರು ಇಂದು(ರವಿವಾರ) ನಿಧನರಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲಾ ಪರಿಷತ್ ಸದಸ್ಯರಾಗಿ, ಜಿಲ್ಲೆಯ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ಜನತಾದಳ ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ರಾಜೇಂದ್ರ ಅವರು, ಶೃಂಗೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಮೂರು ಬಾರಿ ಸ್ಪರ್ಧೆ ಮಾಡಿದ್ದರು.
ಎಚ್.ಟಿ.ರಾಜೇಂದ್ರ ಅವರು ತಮ್ಮ ಜನಪರ ರಾಜಕಾರಣದ ಮೂಲಕ ಜಿಲ್ಲೆಯಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದರು.
Next Story





